ಮಾಲೆ: ಹಿರಿಯ ರಾಜತಾಂತ್ರಿಕ ಅಧಿಕಾರಿ ಐಶಾತ್ ಅಜೀಮ್ ಅವರನ್ನು ಭಾರತದಲ್ಲಿನ ಮಾಲ್ದೀವ್ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ.
0
samarasasudhi
ಅಕ್ಟೋಬರ್ 16, 2024
ಮಾಲೆ: ಹಿರಿಯ ರಾಜತಾಂತ್ರಿಕ ಅಧಿಕಾರಿ ಐಶಾತ್ ಅಜೀಮ್ ಅವರನ್ನು ಭಾರತದಲ್ಲಿನ ಮಾಲ್ದೀವ್ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ.
2022ರಿಂದ ಭಾರತದಲ್ಲಿ ಮಾಲ್ದೀವ್ ರಾಯಭಾರಿಯಾಗಿದ್ದ ಇಬ್ರಾಹಿಂ ಶಹೀಬ್ ಅವರ ಸ್ಥಾನಕ್ಕೆ ಐಶಾತ್ ಅಜೀಮ್ ಅವರನ್ನು ನೇಮಿಸಲಾಗಿದೆ ಎಂದು ಮಾಧ್ಯಮಗಳು ಮಂಗಳವಾರ ವರದಿ ಮಾಡಿವೆ.
ಭಾರತದೊಂದಿಗಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಮಾಲ್ದೀವ್ ಈ ಕ್ರಮ ಕೈಗೊಂಡಿದೆ. ಮಾಲ್ದೀವ್ ಅಧ್ಯಕ್ಷ ಮೊಹಮ್ಮದ್ ಮುಯಿಜು ಅವರು ಭಾರತದ ಪ್ರವಾಸ ಮುಗಿಸಿ ಸ್ವದೇಶಕ್ಕೆ ಮರಳಿದ ಬೆನ್ನಲ್ಲೆ ಈ ಬೆಳವಣಿಗೆ ನಡೆದಿದೆ.
ಅಜೀಮ್ ನೇಮಕಕ್ಕೆ ಒಪ್ಪಿಗೆ ನೀಡುವಂತೆ ಮುಯಿಜು ಅವರು ಸೋಮವಾರ ವಿದೇಶಾಂಗ ವ್ಯವಹಾರಗಳ ಸಂಸದೀಯ ಸಮಿತಿಗೆ ಪತ್ರ ಬರೆದಿದ್ದರು. ಸಮಿತಿಯು ಮಂಗಳವಾರ ಒಪ್ಪಿಗೆ ಸೂಚಿಸಿದೆ.
ವಿದೇಶಾಂಗ ಇಲಾಖೆಯಲ್ಲಿ ಹಲವು ಉನ್ನತ ಹುದ್ದೆಗಳನ್ನು ನಿರ್ವಹಿಸಿರುವ ಅಜೀಮ್ ಅವರು 2019ರಿಂದ 2023ರವರೆಗೆ ಚೀನಾದಲ್ಲಿ ಮಾಲ್ದೀವ್ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದರು.