ಕಾಸರಗೋಡು: ಜಿಲ್ಲಾಡಳಿತ ಹಾಗೂ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಕೇರಳ ರಾಜ್ಯೋತ್ಸವ ಅಂಗವಾಗಿ ಮಲೆಯಾಳ ದಿನಾಚರಣೆ ಹಾಗೂ ಆಡಳಿತ ಭಾಷಾ ಸಪ್ತಾಹ ಶುಕ್ರವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜರುಗಿತು.
ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಅಧ್ಯಕ್ಷತೆ ವಹಿಸಿದ್ದರು. ಇ ಸಂದರ್ಭ ಇತಿಹಾಸ ಸಂಶೋಧಕ ಡಾ. ಸಿ.ಬಾಲನ್, ತುಳು, ಕನ್ನಡ ಸಾಹಿತ್ಯ ಮತ್ತು ಭಾಷೆಯ ಉನ್ನತಿಗೆ ಹಾಗೂ ಹಿಂದುಳಿದ ಸಮಾಜದ ಪ್ರಗತಿಗೆ ಶ್ರಮಿಸುತ್ತಿರುವ ಬರಹಗಾರ ಸುಂದರ ಬಾರಡ್ಕ ಅವರನ್ನು ಗೌರವಿಸಲಾಯಿತು. ಕೇರಳ ಸಾಹಿತ್ಯ ಅಕಾಡೆಮಿ ಪುರಸ್ಕøತ ಕೆ.ವಿ.ಕುಮಾರನ್ ಮಾಸ್ಟರ್ ಮುಖ್ಯ ಭಾಷಣ ಮಾಡಿದರು.
ಎ.ಡಿ.ಎಂಪಿ.ಅಖಿಲ್ ಅವರು ಪ್ರಮಾಣ ವಚನ ಬೋಧಿಸಿದರು. ಅಧಿಕೃತ ಭಾಷಾ ಸೇವಾ ಜಿಲ್ಲಾ ಪ್ರಶಸ್ತಿ ವಿಜೇತ ಆರ್. ನಂದಲಾಲ್ ಮತ್ತು 'ನಮ್ಮ ಕಾಸರಗೋಡು' ಲಾಂಛನ ಸ್ಪರ್ಧಾ ವಿಜೇತ ನಿತಿನ್ ಅವರನ್ನು ಸಮ್ಮಾನಿಸಲಾಯಿತು.
ಕೇರಳ ರಾಜ್ಯೋತ್ಸವ ಅಂಗವಾಗಿ ತುಳು, ಕನ್ನಡ ಸಾಹಿತಿ ಸಉಂದರ ಬಾರಡ್ಕ ಅವರನ್ನು ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಗೌರವಿಸಿದರು.


