ಕಾಸರಗೋಡು: ಕಂದಾಯ ಜಿಲ್ಲಾ ಶಾಲಾ ವಿಜ್ಞಾನೋತ್ಸವ ಚೆಮ್ನಾಡು ಜಮಾ-ಅತ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶುಕ್ರವಾರ ಆರಂಭಗೊಂಡಿತು. ಕಾಸರಗೋಡು ಶಾಸಕ ಎನ್. ಎ. ನೆಲ್ಲಿಕುನ್ನು ಮೇಳ ಉದ್ಘಾಟಿಸಿದರು.
ಕಾಸರಗೋಡು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಧ್ವಜಾರೋಹಣ ನೆರವೇರಿಸಿದರು. ಸಿಪಿಸಿಆರ್‍ಐ ನಿರ್ದೇಶಕ ಡಾ, ಬಾಲಚಂದ್ರ ಹೆಬ್ಬಾರ್ ವಿಜ್ಞಾನ ಸಂದೇಶ ನೀಡಿದರು. ಕಾಸರಗೋಡು ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಸಿ. ಎ. ಸೈಮಾ, ಗೀತಾ ಕೃಷ್ಣನ್, ಬದರುಲ್ ಮುನೀರ್, ಅಮೀರ್ ಪಾಲೋತ್, ಶಾಹಿನಾ. ಕೆ. ಎಂ ಮತ್ತು ಮುಜೀಬ್ ಅಹಮದ್ ಉಪಸ್ಥಿತರಿದ್ದರು. ಕಾಸರಗೋಡು ಜಿಲ್ಲಾ ಶೀಕ್ಷಣ ಉಪ ನಿರ್ದೇಶಕ ಟಿ. ವಿ.ಮಧುಸೂಧನ್ ಸ್ವಾಗತಿಸಿದರು. ಸಿಜೆಎಚ್‍ಎಸ್ ಮುಖ್ಯೋಪಾಧ್ಯಾಯ ಕೆ ವಿಜಯನ್ ಅವರಿಗೆ ವಂದಿಸಿದರು.

