HEALTH TIPS

ಸಿರಿಬಾಗಿಲು ಸಾಂಸ್ಕøತಿಕ ಭವನ-26ರಂದು ಪ್ರಥಮ ವಾರ್ಷಿಕೋತ್ಸವ

ಕಾಸರಗೋಡು: ಗಡಿನಾಡು ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದ ಪ್ರಥಮ ವಾರ್ಷಿಕೋತ್ಸವ ಡಿ.26 ರಂದು  ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವೈಭವದಿಂದ ಜರುಗಲಿದೆ. 26 ರಂದು ಬೆಳಗ್ಗೆ 7ರಿಂದ ಭಜನೆ, 10ಕ್ಕೆ ಪ್ರತಿಷ್ಠಾನದ ಯಕ್ಷಗಾನ"" ಯಕ್ಷಗಾನ ಮುಂದಿನ ಪೀಳಿಗೆಗೆ ಹಸ್ತಾಂತರ"" ಯೋಜನೆಯಂತೆ ಮಕ್ಕಳ ತಂಡದ ಯಕ್ಷಗಾನ ತಾಳಮದ್ದಳೆ ಜರುಗಲಿದೆ. 

ಮಧ್ಯಾಹ್ನ 2ರಿಂದ ಪ್ರತಿಷ್ಠಾನದ ಯಕ್ಷಗಾನ ಗುರುಗಳಾದ ಪ್ರಸಿದ್ಧ ಯಕ್ಷಗಾನ ಕಲಾವಿದ ಲಕ್ಷ್ಮಣ ಕುಮಾರ್ ಮರಕಡ ಅವರ ನಿರ್ದೇಶನದಲ್ಲಿ ಪ್ರತಿಷ್ಠಾನದ ಯಕ್ಷಗಾನ ತರಬೇತಿ ಕೇಂದ್ರದ ವಿದ್ಯಾರ್ಥಿಗಳ ರಂಗ ಪ್ರವೇಶ- ಯಕ್ಷಗಾನ ಪ್ರದರ್ಶನ ನಡೆಯಲಿದೆ.  ಸಂಜೆ 4ಕ್ಕೆ ನಡೆಯುವ  ಸಭಾ ಕಾರ್ಯಕ್ರಮದಲ್ಲಿ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಆಶೀರ್ವಚನ ನೀಡಲಿದ್ದಾರೆ. ಹಾವೇರಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತುಗೌರವಾಧ್ಯಕ್ಷರಾದ ಶೇಖರ ಗೌಡ ಪಾಟೀಲ ಅಧ್ಯಕ್ಷತೆ ವಹಿಸುವರು. ಶಾಸಕ ಎನ್ .ಎ .ನಲ್ಲಿಕುನ್ನು, ಬಹುಭಾಷಾ ವಿದ್ವಾಂಸರಾದ ಮಂಡ್ಯದ ಕೊಕ್ಕಡ ವೆಂಕಟ್ರಮಣ ಭಟ್, ಡಾ. ಪ್ರಭು ಸ್ವಾಮಿ ಹಾಳೇವಾಡಿ ಮಠ, ಡಾ. ಎಸ್ ಹನುಮಂತಪ್ಪ ಹಾವೇರಿ, ಶ್ರೀಧರ ಶೆಟ್ಟಿ ಮುಟ್ಟಂ, ಗೋಪಾಲ ಶೆಟ್ಟಿ, ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ,ಗೋಪಿಕಾ ಸತೀಶ ಮಯ್ಯ, ನರಸಿಂಹಮೂರ್ತಿ, ಡಾ. ಗಂಗಯ್ಯ ಕುಲಕರ್ಣಿ, ಮುಖೇಶ್ , ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಮುಕೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. 

ಈ ಸಂದರ್ಭ ಮಧುರ ಉಪಾಧ್ಯ ಬೆಂಗಳೂರು, ಪಣಂಬೂರು ಶಂಕರನಾರಾಯಣ ಕಾರಂತ,  ಲಕ್ಷ್ಮಣ ಕುಮಾರ್ ಮರಕಡ ಇವರನ್ನು ಪ್ರತಿಷ್ಠಾನವತಿಯಿಂದ ಗೌರವಿಸಲಾಗುವುದು. ಸಭಾ ಕಾರ್ಯಕ್ರಮದ ನಂತರ ಪ್ರತಿಷ್ಠಾನದ ಯಕ್ಷಗಾನ ತಂಡದಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ.  



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries