ಕುಂಬಳೆ: ಬೆಂಗಳೂರಿನ ಅರಮನೆ ಮೈದಾನದಲ್ಲಿ ಡಿಸೆಂಬರ್ 27 ರಿಂದ ಮೂರು ದಿನಗಳ ಕಾಲ ನಡೆಯಲಿರುವ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಕಾಸರಗೋಡಿನ ಹಿರಿಯ ಸಾಹಿತಿ,ಶಿಕ್ಷಣತಜ್ಞ, ವಿ.ಬಿ.ಕುಳಮರ್ವ ಅವರ ಬಹುಮುಖ ಸಾಧನೆಗಾಗಿ "ಹವ್ಯಕ ಸಾಧಕ ರತ್ನ" ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. "ಹವಿ-ಸವಿ ಕೋಶ" ಎಂಬ ಪ್ರಪ್ರಥಮ ಹವ್ಯಕ-ಕನ್ನಡ ನಿಘಂಟನ್ನು ರಚಿಸಿದ ಇವರು ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನದ ಪ್ರಧಾನ ಗೋಷ್ಠಿಯೊಂದರ ಅಧ್ಯಕ್ಷ ಸ್ಥಾನದ ಗೌರವಕ್ಕೂ ಪಾತ್ರರಾಗಿದ್ದರು. ಸಾಹಿತ್ಯ ಹಾಗೂ ಶಿಕ್ಷಣದಲ್ಲಿ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಯೆನಿಸಿ ಬಹುಶ್ರುತ ವಿದ್ವಾಂಸರಾದ ಇವರನ್ನು ಕಾಸರಗೋಡಿನ ಕನ್ನಡ ಬಂಧುಗಳು ಅಭಿನಂದಿಸಿದ್ದಾರೆ.

-VB%20KULAMARVA.jpg)
