ಮಂಜೇಶ್ವರ : ಸಂವಿಧಾನ ಬಗ್ಗೆ ಮಾತನಾಡಲು ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ಪಕ್ಷಗಳಿಗೆ ಯಾವುದೇ ಅರ್ಹತೆ ಇಲ್ಲ. ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ದಬ್ಬಾಳಿಕೆ ನಡೆಸಿದ ಸಂವಿಧಾನ ವನ್ನು ಕೊಲೆ ಮಾಡಿದ ಇಂದಿರಾಗಾಂಡಿ ಕುಟುಂಬಕ್ಕೆ, ದೇಶದ ಸ್ವತಂತ್ರ ವನ್ನೇ ಒಪ್ಪದೇ ಅಂದು ದೇಶ ವಿರೋಧಿ ಆಗಿದ್ದ ಕಮ್ಯುನಿಸ್ಟ್ ಪಕ್ಷಗಳು ಇಂದು ಸಂವಿಧಾನ ಸಂರಕ್ಷಣೆ ಅಂತ ಬಡಿದು ಕೊಳ್ಳುವುದು ಸ್ವಯಂ ರಕ್ಷಣೆಯ ನಾಟಕ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಅಬ್ದುಲ್ಲ ಕುಟ್ಟಿ ಹೇಳಿದರು.
ಪೈವಳಿಕೆ ಪಂಚಾಯತಿ ಮಟ್ಟದ ಅಟಲ್ ಬಿಹಾರಿ ವಾಜಪಾಯಿ ಯವರ 100ನೇ ಜನ್ಮ ದಿನದ ಕಾರ್ಯಕ್ರಮವನ್ನು ಬುಧವಾರ ಕಾಯರ್ ಕಟ್ಟೆ ಬಿಜೆಪಿ ಕಚೇರಿಯಲ್ಲಿ ಉದ್ಘಾಟಿಸಿ ಮಾತನಾಡಿದರು.
ಮಹಿಳಾ ಸಬಲೀಕರಣಕ್ಕೆ ಕುಟುಂಬಶ್ರೀಯನ್ನು ದೇಶದಲ್ಲಿ ಜಾರಿಗೆ ತಂದವರು ಅಟಲ್ ಜೀ, ಗಲ್ಫ್ ರಾಷ್ಟ್ರ ಗಳಿಗೆ ಹೋಗಿ ದುಡಿಯಲ್ಲೂ ಅಂದು ಗಲ್ಫ್ ರಾಷ್ಟ್ರ ಗಳೊಂದಿಗೆ ಒಪ್ಪಂದ ಮಾಡಿದವರು ಅಟಲ್ ಜೀ, ಅಧಿಕಾರ ಕ್ಕಿಂತ ತತ್ವ, ಸಿದ್ದಂತ ಮುಖ್ಯ ಅಂತ ತೋರಿಸಿದವರು ಅಟಲ್ ಜೀ ಎಂದು ಅವರು ಹೇಳಿದರು. ತ್ರಿವಳಿ ತಲಾಕ್ನಿμÉೀದ, ಜಮ್ಮು ಕಾಶ್ಮೀರ 370ನೇ ವಿಧಿ ರದ್ದು, ಏಕ ನಾಗರೀಕತೆ, ಒಂದು ರಾಷ್ಟ್ರ ಒಂದು ಚುನಾವಣೆ ದೇಶದ ಅಭಿವೃದ್ಧಿಯ ಸಂಕೇತ ಎಂದು ಅವರು ಹೇಳಿದರು.
ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ ಎಂ ಅಧ್ಯಕ್ಷತೆ ವಹಿಸಿದ್ದರು. ಜಿಲ್ಹಾ ಕಾರ್ಯದರ್ಶಿ ಮಣಿಕಂಠ ರೈ, ಮುಖಂಡರಾದ ಎ. ಕೆ ಕಯ್ಯಾರ್, ಪ್ರಸಾದ್ ರೈ, ಕೆ.ವಿ ಭಟ್, ಯತೀರಾಜ್ ಶೆಟ್ಟಿ, ಪ್ರಶಾಂತ್ ಜೋಡುಕಲ್ಲು, ಸುಬ್ರಮಣ್ಯ ಭಟ್ ವಿಘ್ನೇಶ್ವರ ಮಾಸ್ತರ್, ಪುಷ್ಪ ಲಕ್ಶ್ಮೀ ಮೊದಲದವರು ಉಪಸ್ಥಿತರಿದ್ದರು. ಲೋಕೇಶ್ ನೋಂಡ ಸ್ವಾಗತಿಸಿ, ಸದಾಶಿವ ಚೇರಾಲ್ ವಂದಿಸಿದರು. ಇದೇ ಸಂದರ್ಭ ಬಿಜೆಪಿ ಸೇರ್ಪಡೆಗೊಂಡ ಪೈವಳಿಕೆ ಪಂಚಾಯತಿ ಮಾಜಿ ಅಧ್ಯಕ್ಷ ಎಡರಂಗ ನೇತಾರ ಕೃಷ್ಣ ಅವರ ಪುತ್ರ ಗಣೇಶ ಅವರನ್ನು ಬಿಜೆಪಿಗೆ ಸ್ವಾಗತಿಸಲಾಯಿತು.

.jpg)
.jpg)
.jpg)
