ಕಾಸರಗೋಡು : ಸ್ನೇಹ ಹಾಗೂ ಬಾಂಧವ್ಯದ ಸಂದೇಶದೊಂದಿಗೆ ಜಿಲ್ಲೆಯಲ್ಲಿ ಕ್ರೈಸ್ತ ಬಾಂಧವರು ಕ್ರಿಸ್ ಮಸ್ ಹಬ್ಬವನ್ನು ಭಕ್ತಿ, ಸಂಭ್ರಮದಿಂದ ಆಚರಿಸಿದರು. ಮಂಗಳವಾರ ರಾತ್ರಿ ಇಗರ್ಜಿಗಳಲ್ಲಿ ನಡೆದ ದಿವ್ಯ ಬಲಿಪೂಜೆಯಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು.
ಬಂದ್ಯೋಡು ಸನಿಹದ ಕಯ್ಯಾರ್ ಕ್ರಿಸ್ತ ರಾಜ ಇಗರ್ಜಿಯಲ್ಲಿ ನಡೆದ ಬಲಿಪೂಜೆಗೆ ಕಂಕನಾಡಿ ಫಾದರ್ ಮುಲ್ಲರ್ಸ್ ಆಸ್ಪತ್ರೆಯ ಆಡಳಿತಾಧಿಕಾರಿ ಫಾ. ಅಜಿತ್ ಮಿನೇಜಸ್ ನೇತೃತ್ವ ನೀಡಿದರು. ರಾಂಚಿ ಸೆಮಿನರಿಯ ನಿರ್ದೇಶಕ ಫಾ.ಜೋನ್ ಕ್ರಾಸ್ತ, ಫಾ.ಜೋಸ್ವಿನ್ ಡಿ ಸೋಜ ಹಾಗೂ ಕಯ್ಯಾ ರ್ ಕ್ರಿಸ್ತರಾಜ ಇಗರ್ಜಿ ಧರ್ಮಗುರು ಫಾ. ವಿಶಾಲ್ ಮೋನಿಸ್
ಉಸ್ಥಿತರಿದ್ದರು. ಬಳಿಕ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಜರಗಿತು.
ಕ್ರಿಸ್ಮಸ್ ಗೀತೆಗಳನ್ನು ಹಾಡಿ ಯೇಸು ಕ್ರಿಸ್ತರ ಜನನವನ್ನು ಸ್ಮರಿಸಿ ನಮಿಸಲಾಯಿತು. ಗೋದಲಿ, ನಕ್ಷತ್ರ ಸೇರಿದಂತೆ ದೀಪಾಲಂಕಾರಗಳಿಂದ ಇಗರ್ಜಿಗಳನ್ನು ಅಲಂಕಾರಗೊಳಿಸಲಾಗಿತ್ತು.
ಕಯ್ಯಾರ್ ಕ್ರಿಸ್ತ ರಾಜ ಇಗರ್ಜಿಯಲ್ಲಿ ನಡೆದ ಬಲಿಪೂಜೆಗೆ ಕಂಕನಾಡಿ ಫಾದರ್ ಮುಲ್ಲರ್ಸ್ ಆಸ್ಪತ್ರೆಯ ಆಡಳಿತಾಧಿಕಾರಿ ಫಾ. ಅಜಿತ್ ಮಿನೇಜಸ್ ನೇತೃತ್ವ ನೀಡಿದರು.


