ಕಾಸರಗೋಡು: ತ್ಯಾಜ್ಯಮುಕ್ತ ನವಕೇರಳಂ ಕಾರ್ಯಕ್ರಮದ ಅಂಗವಾಗಿ ಕೇರಳ ಎನ್‍ಜಿಒ ಯೂನಿಯನ್ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಮುಳಿಯಾರ್ ಸಿಎಚ್‍ಸಿಯಲ್ಲಿ ಸ್ಥಾಪಿಸಲಾದ ಹಸಿರು ಅಂಗಳವನ್ನು ಶಾಸಕ ಸಿ.ಎಚ್.ಕುಞಂಬು ಉದ್ಘಾಟಿಸಿದರು.
ರಾಜ್ಯ ಸರ್ಕಾರದ ಕಸಮುಕ್ತ ನವಕೇರಳಂ ಅಭಿಯಾನದ ಅಂಗವಾಗಿ ಮುಳಿಯಾರು ಸಿಎಚ್‍ಸಿ ಆವರಣವನ್ನು ಸ್ವಚ್ಛಗೊಳಿಸಿ ಹಸಿರೀಕರಣಗೊಳಿಸಲಾಗಿದೆ. ಒಕ್ಕೂಟದ ಜಿಲ್ಲಾಧ್ಯಕ್ಷೆ ವಿ.ಶೋಭಾ ಅಧ್ಯಕ್ಷತೆ ವಹಿಸಿದ್ದರು. ಒಕ್ಕೂಟದ ರಾಜ್ಯಾಧ್ಯಕ್ಷ ಎಂ.ವಿ.ಶಶಿಧರನ್, ಕಾರಡ್ಕ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಸಿ.ಜಿ.ಮ್ಯಾಥ್ಯೂ, ಮುಳಿಯಾರ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಿನಿ ಪಿ.ವಿ., ಮುಳಿಯಾರ್ ಸಿ.ಎಚ್.ಸಿ. ವೈದ್ಯಾಧಿಕಾರಿ ಡಾ. ಶಮೀಮಾ ತನ್ವೀರ್ ಹಾಗೂ ಒಕ್ಕೂಟದ ರಾಜ್ಯ ಸಮಿತಿ ಸದಸ್ಯ ಕೆ.ಭಾನುಪ್ರಕಾಶ್ ಉಪಸ್ಥಿತರಿದ್ದರು. ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಟಿ ದಾಮೋದರನ್ ಸ್ವಾಗತಿಸಿ, ಜಿಲ್ಲಾ ಖಜಾಂಚಿ ಎಂ ಜಿತೇಶ್ ವಂದಿಸಿದರು.

