ಮಂಜೇಶ್ವರ: ಶ್ರೀವಾಣಿ ವಿಜಯ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶುಕ್ರವಾರ ಅಗ್ನಿಶಾಮಕ ದಳದಿಂದ ಅಗ್ನಿ ಅನಾಹುತ ಉಂಟಾದಾಗ ಜನರನ್ನು ರಕ್ಷಿಸುವ ವಿವಿಧ ವಿಧಾನಗಳು ಕುರಿತು ಅತುಲ್ ಫಯರ್ ರೆಸಿಕ್ಯೂ ಅಧಿಕಾರಿ ತರಬೇತಿ ನಡೆಸಿದರು. ಎಲ್ಲಾ ವಿದಾರ್ಥಿಗಳು ಕ್ರಿಯಾತ್ಮಕವಾಗಿ ತರಗತಿಯಲ್ಲಿ ಭಾಗವಹಿಸಿದರು. ಅಗ್ನಿಶಾಮಕ ಇಲಾಖೆಯ ಸುಜಿತ್ ತರಗತಿಗೆ ಸಹಕಾರವನ್ನು ನೀಡಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಕೃಷ್ಣವೇಣಿ ಬಿ. ಸ್ವಾಗತಿಸಿ, ಮಧುಶ್ಯಾಂ ವಂದಿಸಿದರು. ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು.



.jpg)
.jpg)
