ಮಂಜೇಶ್ವರ: ಶ್ರೀಕ್ಷೇತ್ರ ಸಂತಡ್ಕ ಮಾಡದ ಶ್ರೀ ಅರಸು ಸಂಕಲ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಯುಕ್ತ ಜನವರಿ 21ರಂದು ಸಂಜೆ 4 ಕ್ಕೆ ವಾಗ್ದೇವಿ ಯಕ್ಷಗಾನ ಕಲಾ ಸಂಘದಿಂದ ಮಾಗಧ ವಧೆ ಕಥಾಭಾಗದ ತಾಳಮದ್ದಳೆ ಜರಗಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ರವಿಶಂಕರ್ ಮಧೂರು, ಚೆಂಡೆಯಲ್ಲಿ ಗೋಪಾಲಕೃಷ್ಣ ನಾವಡ ಮಧೂರು ಮತ್ತು ಮೃದಂಗದಲ್ಲಿ ಮುರಳೀ ಮಾಧವ ಮಧೂರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




