ಸಮರಸ ಚಿತ್ರಸುದ್ದಿ: ಮುಳ್ಳೇರಿಯ: ಅಡೂರು ಬೈತನಡ್ಕದ ಅಭಿರಕ್ಷಾ ಕೃಷ್ಣವೇಣಿ ಅವರು ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು ಎಸ್. ಬಾಲಸುಬ್ರಹ್ಮಣ್ಯ ಭಟ್- ಶಾರದಾದೇವಿ ದಂಪತಿಯ ಪುತ್ರಿ. ಇವರು ಮಂಗಳೂರಿನ ರಾವ್ ಮತ್ತು ಬಸ್ರಿ ಸಂಸ್ಥೆಯ ಪಾಲುದಾರ ಕೆ ಶಿವಕುಮಾರ ಅವರ ಮಾರ್ಗದರ್ಶನದಲ್ಲಿ ಸಿಎ ಶಿಕ್ಷಣ ನಡೆಸಿದ್ದರು. ಇವರು ಅಡೂರಿನ ವಿದ್ಯಾಭಾರತೀ ವಿದ್ಯಾಲಯ, ಈಶ್ವರಮಂಗಲ ಗಜಾನನ ಆಂಗ್ಲ ಮಾಧ್ಯಮ ಶಾಲೆ, ಎನ್.ಎಂ.ಪಿ.ಯು.ಸಿ ಸುಳ್ಯ, ನಂತೂರಿನ ಶ್ರೀ ಭಾರತೀ ಕಾಲೇಜಿನಲ್ಲಿ ಶಿಕ್ಷಣ ಪೂರೈಸಿದ್ದರು.




-ABHIRAKSHA.jpg)
