ಮಂಜೇಶ್ವರ: ಶ್ರೀ ಕಡಂಗಲ್ಲಾಯ ಮತ್ತು ಪರಿವಾರ ದೈವಗಳ ದೈವಸ್ಥಾನ ಅಂಗನಿಮಾರು, ನೂಜಿ ಇದರ ವಾರ್ಷಿಕೋತ್ಸವ ನೇಮೋತ್ಸವವು ಮಾ. 21,22 ರಂದು ಜರಗಲಿದ್ದು,ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮ ದೈವಸ್ಥಾನದ ಪರಿಸರದಲ್ಲಿ ಶುಕ್ರವಾರ ಜರಗಿತು.
ಪವಿತ್ರಪಾಣಿ ಬೀಡು ಕುಶಲ ಕುಮಾರ ಪಾತೂರಾಯರು ದೀಪ ಪ್ರಜ್ವಲನಗೈದು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಸಭೆಯ ಅಧ್ಯಕ್ಷತೆಯನ್ನು ಆಡಳಿತ ಸಮಿತಿ ಟ್ರಸ್ಟಿನ ಅಧ್ಯಕ್ಷ ಕರುಣಾಕರ ಶೆಟ್ಟಿ ಕೊಡ್ಲಮೊಗರು ವಹಿಸಿದ್ದರು. ಮುಖ್ಯಅತಿಥಿಗಳಾಗಿ ದೈವನರ್ತಕ ಗಣೇಶ್ ಬಾಯಾರ್, ದಾನಿಗಳಾದ ಸದಾಶಿವ ಮಡ್ವ ಉಪಸ್ಥಿತರಿದ್ದರು. ಹಿರಿಯರಾದ ಕೇಶವ ಮಾಸ್ತರ್ ನೂಜಿ, ಮಹಿಳಾ ಸೇವಾ ಸಮಿತಿಯ ಗೌರವಾಧ್ಯಕ್ಷೆ ಲೀಲಾ ರಾಮ ಮೂಲ್ಯ ನೂಜಿ, ಟ್ರಸ್ಟಿನ ಉಪಾಧ್ಯಕ್ಷ ಈಶ್ವರ ನೂಜಿ, ಪ್ರಧಾನ ಕಾರ್ಯದರ್ಶಿ ಹೂವಯ್ಯ ನೂಜಿ ಹಾಗೂ ಕೋಶಾಧಿಕಾರಿ ನಾರಾಯಣ ಸಾಲಿಯಾನ್ ನೂಜಿ, ಭಕ್ತರು ಉಪಸ್ಥಿತರಿದ್ದರು. ಸೇವಾಸಮಿತಿ ಅಧ್ಯಕ್ಷ ಸುಧೀರ್ ರಂಜನ್ ದೈಗೋಳಿ ಸ್ವಾಗತಿಸಿ, ಸೇವಾ ಸಮಿತಿ ಕಾರ್ಯದರ್ಶಿ ಚಂದ್ರಹಾಸ ಕಾನ ವಂದಿಸಿದರು.




.jpg)
