ಉಪ್ಪಳ: ಉಪ್ಪಳದಲ್ಲಿ ಕೊಟೇಶನ್ ತಂಡವೊಂದು ಯುವಕನನ್ನು ನಗ್ನಗೊಳಿಸಿ, ಹಲ್ಲೆಗೈದು ಪರ್ಸ್ ಹಾಗೂ ಮೊಬೈಲ್ ಕಸಿದು ಕಾರಿನೊಂದಿಗೆ ಪರಾರಿಯಾಗಿದೆ. ತಂಡ ಯುವಕನ ನಗ್ನ ಶರಿರದ ಫೋಟೋ ಪ್ರಚಾರಪಡಿಸದಿರಬೇಕಾದರೆ ಭಾರಿ ಮೊತ್ತದ ಒತ್ತೆಹಣಕ್ಕಾಗಿ ಬೇಡಿಕೆಯಿರಿಸಿರುವ ಬಗ್ಗೆ ಮಂಜೇಶ್ವರ ಠಾಣೆ ಪೊಲೀಸರು ನಾಲ್ವರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.
ಮೊಗ್ರಾಲ್‍ಪುತ್ತೂರು ಬಳ್ಳೂರು ನಿವಾಸಿ ಶಹಲಾಬತ್(26)ಎಂಬಾತನ ದೂರಿನ ಮೇರೆಗೆ ಹನ್ಸಿ, ಉತ್ತು, ಮುಬೀನ್ ಹಾಗೂ ರಯೀಸ್ ಎಂಬವರಿಗೆ ಈ ಕೇಸು. 2024 ಡಿ. 23ರಂದು ರಾತ್ರಿ 10ಕ್ಕೆ ಘಟಮೆ ನಡೆದಿದೆ. ವ್ಯಾಪಾರಕ್ಕೆ ಸಂಬಂಧಿಸಿ ಮಾತನಾಡಲಿರುವುದಾಗಿ ತಿಳಿಸಿ ಹನ್ಸಿ ಎಂಬಾತ ಶಹಲಾಬತ್‍ನನ್ನು ಉಪ್ಪಳ ಮಣಿಮುಂಡಕ್ಕೆ ಕರೆಸಿಕೊಂಡಿದ್ದು, ಅಲ್ಲಿ ಹನ್ಸಿಯೊಂದಿಗೆ ಸೇರಿಕೊಂಡ ತಂಡ ತನ್ನನ್ನು ಕಾರಿನಿಂದ ಹೊರಗೆಲೆದು ನಗ್ನನನ್ನಾಗಿಸಿ ಇದರ ವಿಡಿಯೋ ನಡೆಸಿ, ಹಲ್ಲೆಗೈದಿರುವುದಲ್ಲದೆ, ಲೈಯಲ್ಲಿದ್ದ ಪರ್ಸ್, ಮೊಬೈಲ್ ಕಸಿದು ಪರಾರಿಯಾಘಿದೆ. ನಂತರ ವಿಡಿಯೋ ಪ್ರಚಾರ ನಡೆಸದಿರಲು ಹಣ ನೀಡುವಂತೆ ಒತ್ತಾಯಿಸಿರುವುದಾಗಿ ಶಹಲಾಬತ್ ಮಂಜೇಶ್ವರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾನೆ.




