ಮಧೂರು: ಪುಳ್ಕೂರು ಶ್ರೀ ಮಹಾದೇವ ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರದಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಲಾಯಿತು. ಕ್ಷೇತ್ರದ ಪ್ರಧಾನ ಅರ್ಚಕ ಪ್ರಭಾಕರ ಕಾರಂತರು ಪ್ರಾರ್ಥನೆಗೈದು ಚಾಲನೆ ನೀಡಿದರು.
ಆಡಳಿತ ಸೇವಾ ಸಮಿತಿ ಅಧ್ಯಕ್ಷ ಶೀನ ಶೆಟ್ಟಿ ಕಜೆ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಮೋಹನ್ ಕುಮಾರ್ ಶೆಟ್ಟಿ ಸಿರಿಬಾಗಿಲು ಅವರು ವಾರ್ಷಿಕ ಜಾತ್ರೆಗೆ ಭಕ್ತಬಾಂಧವರ ಸಹಾಯ ಸಹಕಾರವನ್ನು ಕೋರಿ ಆಮಂತ್ರಣ ಪತ್ರಿಕೆಗಳನ್ನು ವಿತರಿಸಲು ವಿವಿಧ ತಂಡಗಳಿಗೆ ಆಹ್ವಾನವಿತ್ತರು. ಫೆ.8 ರಿಂದ ಪ್ರಾರಂಭವಾಗಿ 10 ರ ವರೆಗೆ ನಡೆಯುವ ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸಲು ಕರೆಯಿತ್ತರು.
ಕಾರ್ಯಕ್ರಮದಲ್ಲಿ ಗಣೇಶ್ ಭಂಡಾರಿ ನಡುಮನೆ, ಗೋಪಾಲಕೃಷ್ಣ ಶೆಟ್ಟಿ ಕಜೆ, ಸುಜೇಶ್ ಆಳ್ವ ನೀರಾಳ, ವಿಶ್ವನಾಥ ರೈ ಮಾಯಿಪ್ಪಾಡಿ,ಉಮೇಶ್ ಶೆಟ್ಟಿ ಪಾಲ್ತೋಡು, ಜಯರಾಮ್ ರೈ ಸಿರಿಬಾಗಿಲು, ಚಂದ್ರಕಲ ನೀರಾಳ, ಸುಮಿತ್ರ ಮಯ್ಯ, ಅಮಿತಾ ಅಡ್ಕ, ನಳಿನಿ ಅಡ್ಕ, ವಸಂತಿ ಭಗವತಿ ನಗರ, ರಂಜಿತ ಮಾಯಿಪ್ಪಾಡಿ, ದಿವ್ಯ ಅಡ್ಕ, ಸುಪ್ರೀತಾ ಅಡ್ಕ, ಸವಿತಾ ಮಾಯಿಪ್ಪಾಡಿ, ಶೈಲಜಾ ಮಾಯಿಪ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.

.jpg)
