ಕಾಸರಗೋಡು: ನಿಗದಿತ ಸಂಖ್ಯೆಗಿಂತ ಹೆಚ್ಚಿನ ಮಕ್ಕಳನ್ನು ಶಾಲಾ ವಾಹನಗಳಲ್ಲಿ ಕೊಂಡೊಯ್ಯುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯನ್ವಯ ಪೊಲೀಸರು ಜಿಲ್ಲಾದ್ಯಂತ ಶಾಲಾವಾಹನಗಳ ತಪಾಸಣೆ ನಡೆಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ ಅವರ ನಿರ್ದೇಶದನ್ವಯ ಕಾರ್ಯಾಚರಣೆ ನಡೆಸಲಾಗಿದೆ.
ಶಾಲಾಮಕ್ಕಳನ್ನು ಕರೆದೊಯ್ಯುವ ಆಟೋರಿಕ್ಷಾ, ಜೀಪು, ಕಾರು, ಆಟೋಟ್ಯಾಕ್ಸಿ, ಶಾಲಾ ಬಸ್‍ಗಳನ್ನು ತಪಾಸಣೆ ನಡೆಸಲಾಯಿತು. ತಪಾಸಣೆ ಮುಂದುವರಿಯಲಿರುವುದಾಗಿ ಪೊಲೀಸರು ತಿಳಿಸಿದ್ದಾರೆ.


