ಉಪ್ಪಳ: ವಾನಂದೆ ಆಸುಪಾಸು ಭಾರಿ ಗಾತ್ರದ ಕಾಡುಕೋಣ ಕಂಡುಬಂದಿದ್ದು, ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಮಂಗಲ್ಪಾಡಿ ಪಂಚಾಯಿತಿಯ 14ನೇ ವಾರ್ಡಿನ ವಾನಂದೆಯಲ್ಲಿ ರಸ್ತೆಮಧ್ಯೆ ಕಾಡುಕೋಣ ಕಂಡುಬಂದಿತ್ತು.
ರಸ್ತೆಯಲ್ಲಿ ನಡೆದುಹೋಗುತ್ತಿದ್ದ ಯುವಕ ಕಾಡುಕೋಣ ಕಂಡಿದ್ದು, ಈತ ನೀಡಿದ ಮಾಹಿತಿಯನ್ವಯ ಸ್ಥಳೀಯರು ಆಗಮಿಸಿ ಬೊಬ್ಬಿಟ್ಟಾಗ ಕಾಡುಕೋಣ ಸನಿಹದ ಕುರುಚಲು ಕಾಡಿನ ಮೂಲಕ ಮರೆಯಾಗಿದೆ. ಮಕ್ಕಳು, ಮಹಿಳೆಯರು ಸೇರಿದಂತೆ ನೂರಾರು ಮಂದಿ ಈ ಹಾದಿಯಾಗಿ ಸಂಚರಿಸುತ್ತಿದ್ದು, ಕಾಡುಕೋಣ ಕಂಡುಬಂದಿರುವುದರಿಂದ ಭೀತಿಗೊಳಗಾಗಿದ್ದಾರೆ.

