ಬದಿಯಡ್ಕ.: ಇಲ್ಲಿಯ ಗಣೇಶ ಮಂದಿರದಲ್ಲಿ. ಭಾನುವಾರ ಭಾರತ್ ಮಾತಾ ಪೂಜನ ಕಾರ್ಯಕ್ರಮ ಗೀತಾಜ್ಞಾನ ಯಜ್ಞ ಪಾರಾಯಣ ಘಟಕ ಬದಿಯಡ್ಕ ವತಿಯಿಂದ ನಡೆಯಿತು.
ಈ ಸಂದರ್ಭ ನಡೆದ ಸಭೆಯ ಅಧ್ಯಕ್ಷತೆಯನ್ನು ವಿಜಯಕಾನ ವಹಿಸಿದ್ದರು. ಗೀತಾಜ್ಞಾನ ಯಜ್ಞ ಹಾಗೂ ಭಗವದ್ಗೀತೆಯ ಮಹತ್ವವನ್ನು ಅವರು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಪುಂಡರೀಕಾಕ್ಷ ಬೆಳ್ಳೂರು ಅವರು ಭಾರತ್ ಮಾತಾ ಪೂಜನದ ಮಹತ್ವ ತಿಳಿಸಿದರು. ಕಾರ್ಯಕ್ರಮದಲ್ಲಿ ಶಶಿಕಲಾ ಸಂಪತ್ತಿಲ ಸ್ವಾಗತಿಸಿ, ಕುಮಾರಿ ಮೇಘಾ ವಂದಿಸಿದರು. ಗೀತಾ ಪಾರಾಯಣ ತಂಡದಿಂದ ದೇಶಭಕ್ತಿ ಗೀತೆ, ಭಜನೆ, ಭಗವದ್ಗೀತಾ ಪಾರಾಯಣ ನಡೆಯಿತು. ಲಕ್ಷ್ಮಿಜೀ ಪೈ ಕಾರ್ಯಕ್ರಮ ನಿರೂಪಿಸಿದರು.

.jpg)
