ಬದಿಯಡ್ಕ: ಶ್ರೀ ಪತಂಜಲಿ ಯೋಗಶಿಕ್ಷಣ ಸಮಿತಿಯ ವತಿಯಿಂದ ಕೆಡೆಂಜಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ರಥಸಪ್ತಮಿ ಪ್ರಯುಕ್ತ 108 ಸೂರ್ಯ ನಮಸ್ಕಾರ ಮಂಗಳವಾರ ನಡೆಯಿತು. ಪ್ರಧಾನ ಅರ್ಚಕ ವೇದಮೂರ್ತಿ ಪರೀಕ್ಷಿತ ಹೆಬ್ಬಾರ್ ದೀಪಬೆಳಗಿಸಿ ಚಾಲನೆ ನೀಡಿದರು. ಶಾಖಾ ವಿಸ್ತರಣಾ ಪ್ರಮುಖ ಕುಮಾರ ಸುಬ್ರಹ್ಮಣ್ಯ, ಉಳ್ಳಾಲ ನಗರ ಪ್ರಶಿಕ್ಷಣ ಪ್ರಮುಖ್ ಸದ್ಯೋಜಾತ, ಗಣೇಶಮಂದಿರ ಶಾಖೆಯ ಸಂಚಾಲಕ ವಿಜಯಸಾಯಿ ಬದಿಯಡ್ಕ ಉಪಸ್ಥಿತರಿದ್ದರು. ಯೋಗಬಂಧುಗಳಿಂದ 108 ಸೂರ್ಯನಮಸ್ಕಾರ ಹಾಗೂ ಅಗ್ನಿಹೋತ್ರ, ಭಜನೆ ನಡೆಯಿತು.




.jpg)

