ಬದಿಯಡ್ಕ: ಹಲಸಿನ ಹಣ್ಣಿನ ಅಪ್ಪ ಸೇವೆ ನಡೆದುಬರುತ್ತಿರುವ ಗಡಿಗ್ರಾಮ ಪಡ್ರೆ ಸಮೀಪದ ಏತಡ್ಕ ಶ್ರೀ ಸದಾಶಿವ ದೇವಸ್ಥಾನದ ಪುನರ್ ಪ್ರತಿμÁ್ಠ ಬ್ರಹ್ಮಕಲಶೋತ್ಸವ ಫೆ.11ರಿಂದ 16 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಕ್ಷೇತ್ರ ಸಮಿತಿ ಪದಾಧಿಕಾರಿಗಳು ಗುರುವಾರ ಶ್ರೀಕ್ಷೇತ್ರದಲ್ಗಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಫೆ.11ರಂದು ಬೆಳಿಗ್ಗೆ ಹಸಿರುವಾಣಿ ಕಾಣಿಕಾ ಸಂಗ್ರಹ ಅಭಿಯಾನದೊಂದಿಗೆ ಉಗ್ರಾಣ ತುಂಬಿಸುವ ಕಾರ್ಯಕ್ಮ ಜರಗಿ ಉತ್ಸವಕ್ಕೆ ನಾಂದಿಯಾಗಲಿದೆ. ಅಪರಾಹ್ನ 5,30ಕ್ಕೆ ಎಡನೀರು ಶ್ರೀ ಸಚ್ಛಿದಾನಂದ ಭಾರತೀ ಶ್ರೀಪಾದಂಗಳ ಆಶೀರ್ವಚನದಲ್ಲಿ ಶಿವಸಂದೇಶ ಸಭಾ ನಡೆಯಲಿದೆ. ತಂತ್ರಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ಉಪಸ್ಥಿತಿಯಲ್ಲಿ ನಡೆಯುವ ಸಭೆಯಲ್ಲಿ ಉದ್ಯಮಿ, ದಾನಿ ಕೆ.ಕೆ.ಶೆಟ್ಟಿ ಅಹ್ಮದ್ ನಗರ, ವಸಂತ ಪೈ ಬದಿಯಡ್ಕ, ಸಿ.ಎ.ಸುಧೀರ್ ಕುಮಾರ್ ಶೆಟ್ಟಿ ಅತಿಥಿಗಳಾಗಿ ಪಾಲ್ಗೊಳ್ಳುವರು.ರಾತ್ರಿ 8.30ರಿಂದ ಸಾಮಗಾನ ಪ್ರಿಯ ವೇದಿಕೆಯಲ್ಲಿ ಐನೂರು ಭಜನಾರ್ಥಿಗಳೊಂದಿಗೆ ಸಂಕೀರ್ತನಕಾರ ರಾಮಕೃಷ್ಣ ಕಾಟುಕುಕ್ಕೆ ಅವರಿಂದ ಶಿವಾರ್ಪಣಂ ವಿಶಿಷ್ಟ ಸಂಕೀರ್ತನೆ ಜರಗಲಿದೆ.
ಇದೇ ದಿನ ಸಂಜೆ 6.30ರಿಂದ ಪಾವಂಜೆ ಮೇಳದ ಯಕ್ಷಗಾನ “ಶಿವಲೀಲಾಮೃತ” ಜರಗಲಿದೆ.
ಫೆ.12ರಂದು ವೈದಿಕ ಕಾರ್ಯಕ್ರಮ, ಭಜನಾರ್ಪಣಂ, ಶಾಸ್ತ್ರೀಯ ಸಂಗೀತ, ತಾಳಮದ್ದಳೆ, ಕುಣಿತ ಭಜನೆ, ಕೈಚಪ್ಪಾಳೆ ಕುಣಿತ, ಭರತನಾಟ್ಯ, ಶಾಸ್ತ್ರೀಯ ಸಂಗಿತ ಜರಗಲಿದೆ. 13ರಂದು ವೈದಿಕ ಕಾರ್ಯಕ್ರಮ, ಭಜನೆ, ಭಗವದ್ಗೀತಾ ಪಾರಾಯಣ, ತಾಳಮದ್ದಳೆ, ಹರಿಕಥೆ, ಕುಣಿತ ಭಜನೆ ಮತ್ತು ರಾತ್ರಿ 7.15ರಿಂದ ಬಾಲಕೃಷ್ಣ ಮಂಜೇಶ್ವರ ಶಿಷ್ಯ ಬಳಗದ ನಾಟ್ಯ ಸಂಕಲ್ಪ ಕಾರ್ಯಕ್ರಮ ಜರಗಲಿದೆ.
ಫೇ.14ರಂದು ವೈದಿಕ ಕಾರ್ಯಕ್ರಮ, ಭಜನೆ, ತಾಳಮದ್ದಳೆ, ದಾಸ ಸಂಕೀರ್ತನೆ, ಯಕ್ಷಗಾನ, ಭರತನಾಟ್ಯ, ತಾಳಮದ್ದಳೆ ಜರಗಲಿವೆ. 15ರಂದು ವೈದಿಕ ಕಾರ್ಯಕ್ರಮ, ಭಜನೆ, ಬದಿಯಡ್ಕದ ದುರ್ಗಾ ಮ್ರೂಸಿಕ್ ಸ್ಕೂಲ್ ಅವರಿಂದ ರಾಗಾಲಾಪನೆ, ಮಧ್ಯಾಹ್ನ ಭರತನಾಟ್ಯ, ಸಂಜೆ 4.30ರಿಂದ ಸಾಮೂಹಿಕ ಸಾಂಬ ಸದಾಶಿವ ಸಂಕೀರ್ತನೆ, ಕುಣಿತ ಭಜನೆ , ದಾಸವಾಣಿ, ಭರತನಾಟ್ಯ ಜರಗಲಿದೆ.
ಫೆ.16ರಂದು ಬೆಳಿಗ್ಗೆ 8.48ರ ಮೀನ ಲಗ್ನದಲ್ಲಿ ದೇವರ ಪ್ರತಿμÉ್ಠ ನಡೆಯಲಿದೆ.
ಮಧ್ಯಾಹ್ನ ಶಿವಸಂದೇಶ ಸಭಾ ಕಾರ್ಯಕ್ರಮ ಜರಗಲಿದ್ದು, ಶ್ರೀರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿಗಳು ಆಶೀರ್ವಚನ ನೀಡುವರು. ಉದ್ಯಮಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಅತಿಥಿಯಾಗಿ ಪಾಲ್ಗೊಳ್ಳುವರು.
ಅಪರಾಹ್ಪ ಭಕ್ತಿಸಂಗೀತ, ಸಾಮೂಹಿಕ ರುದ್ರ ಪಾರಾಯಣ, ಶಾಸ್ತ್ರೀಯ ಸಂಗೀತ, ಯಕ್ಷಗಾನ ಬಯಲಾಟ ಜರಗಲಿದೆ.
ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ವಿವಿಧ ಜನಪರ, ಭಜಕರ ಇಷ್ಟಾರ್ಥ ಸಿದ್ದಿಸುವ ಕ್ರಿಯಾತ್ಮಿಕ ಕಾರ್ಯಕ್ರಮಗಳನ್ನು ಅನುಸರಿಸಿಕೊಂಡುಬರಲಾಗುತ್ತಿದೆ. ಓಂ ನಮಃ ಶಿವಾಯ ಜಪಲಿಪಿ ಯಜ್ಞ, ಅಲಂಕಾರ ಮಾಲೆ, ಮಡಲು ಹೆಣೆಯುವುದು, ಬಟ್ಟೆಚೀಲ ತಯಾರಿ, ಸಾವಯವ ತರಕಾರಿ ಬೆಳೆಸುವುದು, ವಿಭೂತಿ ತಯಾರಿ, ಶ್ರಮದಾನ ಮುಂತಾದ ಕಾರ್ಯಕ್ರಮಗಳು ಇವಲ್ಲಿ ಮುಖ್ಯವಾದುದು.
ಶ್ರೀಕ್ಷೇತ್ರದಲ್ಲಿ ಕಳೆದ 6 ದಶಕಗಳಿಗಿಂತ ಮೊದಲೇ ವಿಶಿಷ್ಟವಾದ ಹಲಸಿನ ಹಣ್ಣಿನ ಅಪ್ಪ ಸೇವೆ ನಡೆದುಬರುತ್ತಿದೆ. ಜೂನ್-ಜುಲೈ ತಿಂಗಳಲ್ಲಿ ಈ ಸೇವೆ ರಾಷ್ಟ್ರಮಟ್ಟದಲ್ಲೇ ಗಮನಾರ್ಹವಾಗಿ, ಮೊತ್ತಮೊದಲ ಹಲಸಿನ ಬಗೆಗಿನ ಜಾಗೃತಿಯ ದೃಷ್ಟಿಯಿಂದ ಗಮನ ಸೆಳೆದಿದೆ.
ಈ ಕುರಿತು ಏತಡ್ಕ ದೇವಳದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವೈ.ಶ್ಯಾಮ್ ಭಟ್ ಬೆಂಗಳೂರು, ಡಾ.ವೈ.ವಿ ಕೃಷ್ಣಮೂರ್ತಿ ಬದಿಯಡ್ಕ, ಚಂದ್ರಶೇಖರ ಏತಡ್ಕ, ಡಾ.ವೈ.ಎಚ್. ಪ್ರಕಾಶ್ ಮೋಧಲಾದವರಿದ್ದರು.



