ಬದಿಯಡ್ಕ: ನಾರಂಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಬ್ರಹ್ಮಕಲಶಾಭಿಷೇಕದ ಪೂರ್ವಭಾವಿಯಾಗಿ ಶುಕ್ರವಾರ ಪೂರ್ವಾಹ್ನ 9.55ರ ವಿೂನ ಲಗ್ನ ಸುಮುಹೂರ್ತದಲ್ಲಿ ಶ್ರೀ ಉಮಾಮಹೇಶ್ವರ ಮತ್ತು ಸಪರಿವಾರ ದೇವರ ಪ್ರತಿಷ್ಠೆ ಜರಗಿತು.
33 ಕೋಟಿ ದೇವತೆಗಳ ಆವಾಸಸ್ಥಾನವಾದ ಗೋವಿನ ದರ್ಶನದ ಸಂದರ್ಭ ಊರಪರವೂರ ಸಹಸ್ರಾರು ಮಂದಿ ಭಗವದ್ಭಕ್ತರು ಈ ಪಾಲ್ಗೊಂಡು ಭಕ್ತಿಭಾವಗಳೊಂದಿಗೆ ಶ್ರೀದೇವರನ್ನು ಪ್ರಾರ್ಥಿಸಿದರು. ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳವರ ನೇತೃತ್ವದಲ್ಲಿ ತಾಂತ್ರಿಕ ವಿಧಿವಿಧಾನಗಳೊಂದಿಗೆ ಜೀವಕಲಶಾಭಿμÉೀಕ, ನಿದ್ರಾಕಲಶಾಭಿμÉೀಕ, ಪ್ರತಿμÁ್ಠಬಲಿ, ಅಂಕುರಪೂಜೆ ನಡೆಯಿತು. ರಾತ್ರಿ ನಿತ್ಯನೈಮಿತ್ಯಾದಿಗಳ ನಿರ್ಣಯ, ಭದ್ರದೀಪವಿಟ್ಟು ಕವಾಟಬಂಧನ, ಅಂಕುರಪೂಜೆ, ಮಂಟಪ ಸಂಸ್ಕಾರ, ಸೋಪಾನ ಪೂಜೆ ನಡೆಯಿತು. ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬ್ರಹ್ಮಕಲಶ, ಸೇವ ಆ ಸಮಿತಿ, ಆಡಳಿತ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಭಜನಮಂಟಪದಲ್ಲಿ ಶ್ರೀ ಗೋಪಾಲಕೃಷ್ಣ ಭಜನ ಸಂಘ ನೆಕ್ರಾಜೆ, ಶ್ರೀ ಲಕ್ಷ್ಮೀಪಾರ್ವತಿ ಭಜನ ಸಂಘ ಬೆಳ್ಳೂರು, ಶ್ರೀ ಅನಂತಪದ್ಮನಾಭ ಮಹಿಳಾ ಭಜನಮಂಡಳಿ ಅನಂತಪುರ, ಶ್ರೀ ಮಹಾಲಿಂಗೇಶ್ವರ ಭಜನ ಮಂಡಳಿ ಅಡೂರು, ಶ್ರೀ ವಿಶ್ವಬ್ರಹ್ಮ ಭಜನ ವೃಂದ ಕಾಸರಗೋಡು ಭಜನ ಸೇವೆ ನಡೆಸಿಕೊಟ್ಟರು. ಉಮಾಮಹೇಶ್ವರ ಸಾಂಸ್ಕøತಿಕ ವೇದಿಕೆಯಲ್ಲಿ ಕುಮಾರಿ ವರ್ಷಿಣಿ ಆರ್ ಪುಣಿಂಚಿತ್ತಾಯ ಪುಂಡೂರು, ಆಯಾರ್ಂಬಾ ಮಾತೃಮಂಡಳಿ ನಾರಂಪಾಡಿ ಇವರಿಂದ ತಿರುವಾದಿರ, ವಿದುಷಿ ವಾಣೀಪ್ರಸಾದ್ ಕಬೆಕೋಡು ಸುನಾದ ಸಂಗೀತ ಕಲಾಶಾಲೆ ಬದಿಯಡ್ಕ ಇವರಿಂದ ಶಾಸ್ತ್ರೀಯ ಸಂಗೀತ, ಸಂಜೆ ಕಲಾರತ್ನ ಶಂ.ನಾ.ಅಡಿಗ ಕುಂಬಳೆ ಅವರ ಕೀರ್ತನಾ ಕುಟೀರದ ವಿದ್ಯಾರ್ಥಿಗಳಿಂದ ಹರಿಕಥಾ ಸತ್ಸಂಗ ನಡೆಯಿತು.
ಇಂದು (ಫೆ.8) ಶನಿವಾರದ ಕಾರ್ಯಕ್ರಮಗಳು :
ಪ್ರಾತಃಕಾಲ ಗಣಪತಿ ಹೋಮ, ಇಂದ್ರಾದಿ ದಿಕ್ಪಾಲಕ ಪ್ರತಿಷ್ಠೆ, ಸಪ್ತ ಮಾತೃಕಾ ಪ್ರತಿμÉ್ಠ, ನಿರ್ಮಾಲ್ಯಧಾರಿ ಪ್ರತಿμÉ್ಠ, ಅಂಕುರ ಪೂಜೆ, ಸೋಪಾನ ಪೂಜೆ ನಡೆಯಲಿದೆ. ವಿವಿಧ ಭಜನ ಸಂಘಗಳಿಂದ ಭಜನೆ, ಕುಣಿತ ಭಜನೆ ನಡೆಯಲಿದೆ. ಸಾಂಸ್ಕೃತಿಕ ವೇದಿಕೆಯಲ್ಲಿ ಹಿಂದುಸ್ತಾನೀ ಶಾಸ್ತ್ರೀಯ ಸಂಗೀತ ಹಾಗೂ ಭಜನ್, ಯಕ್ಷಗಾನ ವೈಭವ, ಭಕ್ತಗಾನಾಮೃತ, ನೃತ್ಯ ಗಾಐನ, ಭರತನಾಟ್ಯ, ಫ್ಯೂಶನ್ ಡ್ಯಾನ್ಸ್, ಭರತನಾಟ್ಯ ಮತ್ತು ನೃತ್ಯ ವೈವಿಧ್ಯ ನಡೆಯಲಿದೆ.




