ತಿರುವನಂತಪುರಂ: ಡಿಜಿಟಲ್ ಕ್ರಾಂತಿಯಲ್ಲಿ ಕೇರಳವನ್ನು ಜಾಗತಿಕ ನಾಯಕತ್ವಕ್ಕೆ ಕೊಂಡೊಯ್ಯುವುದು ಗುರಿ ಎಂದು ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ನಿನ್ನೆ ಬಜೆಟ್ ಮಂಡನೆಯಲ್ಲಿ ಹೇಳಿದ್ದಾರೆ.
ಈ ಗುರಿಯನ್ನು ಸಾಧಿಸಲು, ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿವಿಧ ಚಟುವಟಿಕೆಗಳಿಗೆ 517.64 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ. ಇದು ಹಿಂದಿನ ವರ್ಷಕ್ಕಿಂತ 10.5 ಕೋಟಿ ರೂ. ಹೆಚ್ಚಾಗಿದೆ. ಐಟಿ ಮಿಷನ್‍ಗೆ 134.03 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಯಿತು. ಇದು ಹಿಂದಿನ ವರ್ಷಕ್ಕಿಂತ 16.85 ಕೋಟಿ ರೂ. ಹೆಚ್ಚಾಗಿದೆ. ಹೊಸ ಐಟಿ ನೀತಿ ರೂಪಿಸುವ ಕೆಲಸ ಅಂತಿಮ ಹಂತದಲ್ಲಿದೆ. ಹೊಸ ನೀತಿ ಮತ್ತು ಇತರ ಐಟಿ ಆಧಾರಿತ ಕೈಗಾರಿಕಾ ಚಟುವಟಿಕೆಗಳ ಆಧಾರದ ಮೇಲೆ ಯೋಜನೆಗಳನ್ನು ಅನುಷ್ಠಾನಗೊಳಿಸಲು ಹಿಂದಿನ ವರ್ಷಕ್ಕೆ ಹೋಲಿಸಿದರೆ ಹೆಚ್ಚುವರಿಯಾಗಿ 20 ಕೋಟಿ ರೂ.ಗಳನ್ನು ನಿಗದಿಪಡಿಸಲಾಗುತ್ತಿದೆ ಎಂದು ಹಣಕಾಸು ಸಚಿವರು ತಿಳಿಸಿದ್ದಾರೆ.
ಕಮ್ಯುನಿಸ್ಟ್ ಮೂಲ ಚಿಂತನೆ ಪ್ರಕಾರ ಆಧುನಿಕ ತಂತ್ರಜ್ಞಾನಗಳಿಗೆ ಬೆಂಬಲ ನೀಡುವಂತಿಲ್ಲ. ಬೂಶ್ರ್ವಾ ಮೇಲ್ಪಂಕ್ತಿಯ ಸಿದ್ದಾಂತ ಪರವಾಗಿ ಇದೀಗ ಕೇರಳದ ಕಮ್ಯುನಿಸ್ಟ್ ಬದಲಾಗುತ್ತಿದೆ/



