ಬದಿಯಡ್ಕ: ಮಾರ್ಚ್ 27ರಿಂದ ಏಪ್ರಿಲ್ 7ರ ತನಕ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವ, ಮೂಡಪ್ಪ ಸೇವೆಯು ನಡೆಯಲಿದ್ದು ಪೂರ್ವಭಾವಿಯಾಗಿ ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರನ್ನು ಕಿಳಿಂಗಾರು ಸಾಯಿಮಂದಿರದಲ್ಲಿ ಸೋಮವಾರ ಭೇಟಿಯಾಗಿ ಆಮಂತ್ರಣಪತ್ರಿಕೆಯನ್ನು ನೀಡಿ ಆಶೀರ್ವಾದ ಪಡೆದರು. ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಕುಳೂರು ಸದಾಶಿವ ಶೆಟ್ಟಿ ಕನ್ಯಾನ, ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ, ಕಾರ್ಯದರ್ಶಿ ಕಾರ್ತಿಕ್ ಶೆಟ್ಟಿ ಮಜಿಬೈಲು ಉಪಸ್ಥಿತರಿದ್ದರು.
ರಾಘವೇಶ್ವರ ಶ್ರೀ ಕರೆ :
ಮಧೂರು ದೇಗುಲದ ವಿಶೇಷವಾದ ಕಾಲಘಟ್ಟದಲ್ಲಿ ದ್ರವ್ಯರೂಪ, ವಸ್ತುರೂಪದ ಸಮರ್ಪಣೆ ಮಾತ್ರವಲ್ಲದೆ ಕಾರ್ಯಕರ್ತರಾಗಿಯೂ ಎಲ್ಲರೂ ತಮ್ಮ ತಮ್ಮ ಸೇವೆಗಳನ್ನು ನೀಡಬೇಕು. ನಮ್ಮ ಸಮಯ, ಶ್ರಮ ಎರಡನ್ನೂ ಸಮರ್ಪಣೆ ಮಾಡಿ ಮಹಾಗಣಪತಿಯ ಸೇವೆಯನ್ನು ಮಾಡಬೇಕು ಎಂದು ಶ್ರೀಗಳು ತಮ್ಮ ಆಶೀರ್ವಚನದ ಸಂದರ್ಭ ಸಮಾಜಕ್ಕೆ ಸಂದೇಶವನ್ನು ನೀಡಿದರು.


