HEALTH TIPS

ಕುಂಭ, ಗಂಗಾ, ಜಮುನಾ...ಕುಂಭಮೇಳದಲ್ಲಿ ಜನಿಸಿದ ಮಕ್ಕಳಿಗೆ ವಿಶಿಷ್ಟ ಹೆಸರು

 ಮಹಾಕುಂಭ ನಗರ: ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದ ಬಳಿ ನಿರ್ಮಿಸಿರುವ ಆಸ್ಪತ್ರೆಯಲ್ಲಿ ಹುಟ್ಟಿರುವ ಮಕ್ಕಳಿಗೆ ಕುಂಭ, ಗಂಗಾ, ಜಮುನಾ, ಬಸಂತಿ ಹೀಗೆ ವಿವಿಧ ರೀತಿಯ ಹೆಸರುಗಳನ್ನಿಡಲಾಗಿದೆ.

ಮಹಾಕುಂಭ ಮೇಳ ನಡೆಯುವಲ್ಲಿ ಸೆಕ್ಟರ್‌ 2ರ ಬಳಿ ಸೆಂಟ್ರಲ್‌ ಆಸ್ಪತ್ರೆಯಿದೆ.

ಈ ಆಸ್ಪತ್ರೆ ಜ.13ರಿಂದ ಆರಂಭವಾಗಿದ್ದು ಫೆ.26ರವರೆಗೆ ಕಾರ್ಯನಿರ್ವಹಿಸಲಿದೆ. ಮಹಾಕುಂಭ ಮೇಳಕ್ಕೆ ಬರುವವರಿಗಾಗಿ ನಿರ್ಮಿಸಿರುವ 13 ವೈದ್ಯಕೀಯ ಸೌಲಭ್ಯಗಳಲ್ಲಿ ಈ ಆಸ್ಪತ್ರೆಯೂ ಒಂದಾಗಿದೆ.


ಈ ಆಸ್ಪತ್ರೆಯಲ್ಲಿ ಮೇಳ ಆರಂಭವಾದಾಗಿನಿಂದ ಜನಿಸಿದ 12 ಮಕ್ಕಳಿಗೆ ವಿಶಿಷ್ಟವಾಗಿ ನಾಮಕರಣ ಮಾಡಲಾಗಿದೆ. 12ನೇ ಮಗು ಭಾನುವಾರ ಹುಟ್ಟಿದೆ. ಎಲ್ಲಾ 12 ಹೆರಿಗೆಯೂ ಸಹಜವಾಗಿಯೇ ಆಗಿದೆ ಎಂದು ಆಸ್ಪತ್ರೆಯ ಮುಖ್ಯ ಅಧೀಕ್ಷಕ ಡಾ. ಮನೋಜ್‌ ಕೌಶಿಕ್‌ ಹೇಳಿದ್ದಾರೆ.

12ನೇ ಮಗುವಿಗೆ ಕುಂಭ-2 ಎಂದು ನಾಮಕರಣ ಮಾಡಲಾಗಿದೆ. ಡಿ.29ರಂದು ಹುಟ್ಟಿದ ಮಗುವಿಗೂ ಇದೇ ಹೆಸರಿಟ್ಟಿದ್ದ ಕಾರಣ ಈ ಮಗುವಿಗೆ ಕುಂಭ-2 ಎಂದು ಹೆಸರಿಡಲಾಗಿದೆ. 'ನಮ್ಮ ಮಗು ಮಹಾಕುಂಭದಲ್ಲಿ ಜನಿಸಿದ್ದಕ್ಕೆ 'ಕುಂಭ' ಎನ್ನುವ ಹೆಸರನ್ನು ಇಟ್ಟಿದ್ದೇವೆ' ಎಂದು ತಂದೆ ದೀಪಕ್‌ ಖುಷಿ ಹಂಚಿಕೊಂಡಿದ್ದಾರೆ.

ಉಳಿದಂತೆ ಭೋಲೆನಾಥ್‌, ಬಜರಂಗಿ, ನಂದಿ ಮತ್ತು ಜಮುನಾ ಎಂದು ಹೆಸರಿಡಲಾಗಿದೆ. ಫೆ.3 ರಂದು ಬಸಂತ ಪಂಚಮಿ ದಿನ ಹುಟ್ಟಿದ ಗಂಡು ಮತ್ತು ಹೆಣ್ಣು ಮಗುವಿಗೆ ಬಸಂತ್‌ ಮತ್ತು ಬಸಂತಿ ಎಂದು ಹೆಸರಿಡಲಾಗಿದೆ.

ಹೆರಿಗೆಯಾದವರಲ್ಲಿ ಕೆಲವರು 4ನೇ ದರ್ಜೆಯ ಉದ್ಯೋಗಗಳ ಪತ್ನಿಯರಾಗಿದ್ದಾರೆ. ಇನ್ನು ಕೆಲವರು ಬೇರೆ ರಾಜ್ಯಗಳಿಂದ ಬಂದ ಭಕ್ತರಾಗಿದ್ದಾರೆ ಎಂದು ವರದಿಯಾಗಿದೆ.

'ಮಹಾಕುಂಭ ಮೇಳದಲ್ಲಿ ಮಗುವಿನ ಜನನವಾಗಿದ್ದು ಮಕ್ಕಳಿಗೆ ಅದೃಷ್ಟ' ಎಂದು ಭಕ್ತರೊಬ್ಬರು ಹೇಳಿದ್ದಾರೆ.

ಮಹಾಕುಂಭಮೇಳದ ಜಾಗದಲ್ಲೇ ಮಗು‌ ಹೆರಬೇಕು ಎಂದು ಜಾರ್ಖಂಡ್‌ ಮಧ್ಯಪ್ರದೇಶದ ಗರ್ಭಿಣಿಯರು ಇಲ್ಲಿನ ಆಸ್ಪತ್ರೆಗೆ ಬಂದು ದಾಖಲಾಗಿದ್ದಾರೆ.

ಮಧ್ಯಪ್ರದೇಶದ ಗ್ವಾಲಿಯರ್‌ನಿಂದ ಬಂದಿದ್ದ ಗರ್ಭಿಣಿಯೊಬ್ಬರಿಗೆ ಪುಣ್ಯಸ್ನಾನದ ವೇಳೆ ಹೊಟ್ಟೆನೋವು ಕಾಣಿಸಿಕೊಂಡಿತು. ತಕ್ಷಣವೇ ಅವರನ್ನು ಆಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ ನಂತರ ಹೆಣ್ಣು ಮಗು ಜನಿಸಿತು. ಕುಟುಂಬಸ್ಥರು ಮಗುವಿಗೆ 'ಸರಸ್ವತಿ' ಎಂದು ಹೆಸರಿಟ್ಟಿದ್ದಾರೆ. ಕುಂ‌ಭಮೇಳದ ಸೆಕ್ಟರ್-2ರಲ್ಲಿ ಸೆಂಟ್ರಲ್‌ ಆಸ್ಪ‍ತ್ರೆ ನಿರ್ಮಿಸಿದ್ದು ಒಟ್ಟು 13 ವೈದ್ಯಕೀಯ ಕೇಂದ್ರಗಳನ್ನು ತೆರೆಯಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries