ಮಂಜೇಶ್ವರ: ಕೊಡ್ಲಮೊಗರು ಶ್ರೀವಾಣಿ ವಿಜಯ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಒಂದು ದಿನದ ವಾರ್ಷಿಕ ಸ್ಕೌಟ್ ಹಾಗು ಗೈಡ್ ಶಿಬಿರ ಭಾನುವಾರ ನಡೆಯಿತು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ಮಜೀದ್ ಪಿ.ಬಿ. ಕಾರ್ಯಕ್ರಮ ಉದ್ಘಾಟಿಸಿದರು.
ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಚೇವಾರು ವಿನೋದ ಹಾಗು ಶ್ರೀಕುಮಾರಿ ಟೀಚರ್ ಶಿಬಿರದ ವಿವಿಧ ಚಟುವಟಿಕೆಗಳನ್ನು ನಡೆಸಿಕೊಟ್ಟರು. ಮುಖ್ಯ ಶಿಕ್ಷಕಿ ಕೃಷ್ಣವೇಣಿ ಶುಭ ಹಾರೈಸಿದರು. ಗೈಡ್ ಶಿಕ್ಷಕಿ ಸುಜಯಶ್ರೀ ಐಲ್ ಸ್ವಾಗತಿಸಿ, ರಮ್ಯ ಟೀಚರ್ ವಂದಿಸಿದರು. ಸ್ಕೌಟ್ ಮಾಸ್ಟರ್ ಸತ್ಯಶಂಕರ್ ಕಾರ್ಯಕ್ರಮ ನಿರೂಪಿಸಿದರು.

.jpg)

