ಕುಂಬಳೆ ಸೀಮೆಯ ಪ್ರಧಾನ ನಾಲ್ಕು ದೇವಾಲಯಗಳಲ್ಲಿ ಒಂದಾದ ಮಧೂರು ಶ್ರೀಮದನಂತೇಶ್ವರ ಸಿದ್ದಿವಿನಾಯಕ ದೇವಾಲಯದಲ್ಲಿ ಮಾ.27 ರಿಂದ ಮೇ.07 ರ ವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವ- ಮೂಡಪ್ಪ ಸೇವೆಯ ಆಮಂತ್ರಣ ಪತ್ರಿಕೆಯನ್ನು ಶ್ರೀಕ್ಷೇತ್ರದಲ್ಲಿ ಇಂದು( ಶುಕ್ರವಾರ) ಬೆಳಿಗ್ಗೆ ದೇವತಾ ಪ್ರಾರ್ಥನೆಯ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿ ಅವರು ಆಶೀರ್ವಚನ ನೀಡಿದರು.
ಅಪೂರ್ವ ಇತಿಹಾಸವಿರುವ ಶ್ರೀಕ್ಷೇತ್ರದ ದೇಶವ್ಯಾಪಿ ಆರಾಧಿಸಿಕೊಂಡು ಬರುತ್ತಿರುವ ಶ್ರೀಮದನಂತೇಶ್ವರ ಸಹಿತ ಮಹಾಗಣಪತಿಯ ಅನುಗ್ರಮ ವಿಶೇಷತೆಗೆ ಕಾರಣೀಭೂತವಾಗಲಿರುವ ಬ್ರಹ್ಮಕಲಶೋತ್ಸವ- ಮೂಡಪ್ಪ ಸೇವೆಯನ್ನು ಈ ತಲೆಮಾರಿನ ಜನ ಕಣ್ತುಂಬಲಿರುವುದು ಹೆಚ್ಚು ಗಮನಾರ್ಹ ಪುಣ್ಯಕಾರ್ಯ. ಸಹಸ್ರಾರು ಸಂಖ್ಯೆಯ ಭಕ್ತರು,ದಾನಿಗಳು, ಧರ್ಮಬೀರುಗಳು, ಸ್ವಾಮಿ ಸೇವಕರ ಬಹುದಿನಗಳ ಕನಸು ನೆರವೇರುವ ದಿನ ಸನ್ನಿಹಿತವಾಗಿರುವುದು ಸಂತಸಮೂಡಿಸಿದೆ. ಪ್ರತಿಯೊಬ್ಬ ಆರ್ತನ ರಕ್ಷಣೆಗೆ ಭಗವಂತ ಅನುಗ್ರಹಿಸುತ್ತಾನೆ. ನಂಬಿಕೆ ಗಟ್ಟಿಯಾಗಿರಲಿ ಎಂದವರು ಆಶೀರ್ವದಿಸಿದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ.ಬಿ.ಎಸ್.ರಾವ್. ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಶ್ರೀ ದೇರೇಬ್ಯೆಲು ಡಾ.ಗುರುರಾಜ ತಂತ್ರಿ, ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಪವಿತ್ರಪಾಣಿ ರತ್ನಕುಮಾರ್ ಕಾಮಡ, ಪ್ರಧಾನ ಅರ್ಚಕ ಶ್ರೀಕೃಷ್ಣ ಉಪಾಧ್ಯಾಯ, ಮಾತನಾಡಿ ಶುಭಹಾರಯಿಸಿದರು. ಕಾರ್ಯಾಧ್ಯಕ್ಷ ಮಂಜುನಾಥ ಕಾಮತ್, ದೇವಸ್ವಂ ಅಧಿಕಾರಿ ಟಿ. ರಾಜೇಶ್, ಮಾಧ್ಯಮ ಸಂಯೋಜಕ ರಾಜೀವ್ ನಂಬ್ಯಾರ್, ಆರ್ಥಿಕ ಸಮಿತಿ ಅಧ್ಯಕ್ಷ ಕೆ.ಸುರೇಶ್ , ಉಪಾಧ್ಯಕ್ಷ ನಾರಾಯಣಯ್ಯ ಉಪಸ್ಥಿತರಿದ್ದರು. ಪ್ರಧಾನ. ಕಾರ್ಯದರ್ಶಿ ಜಯದೇವ ಖಂಡಿಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ ಮಧೂರು ಸ್ವಾಗತಿಸಿ, ಉಪಾಧ್ಯಕಗಷ ಗಿರೀಶ್ ಸಂಧ್ಯಾ ವಂದಿಸಿದರು.




