HEALTH TIPS

ಮಾರ್ಚ್‌ 19ಕ್ಕೆ ಸುನಿತಾ ವಿಲಿಯಮ್ಸ್‌, ಬುಚ್‌ ವಿಲ್ಮೋರ್ ಭೂಮಿಗೆ ವಾಪಾಸ್‌?

ಪ್ಲಾರಿಡಾ: ಕಳೆದ ಒಂಬತ್ತು ತಿಂಗಳಿನಿಂದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್‌) ಸಿಲುಕಿಕೊಂಡಿರುವ ಗಗನಯಾನಿಗಳಾದ ಸುನಿತಾ ವಿಲಿಯಮ್ಸ್‌ ಹಾಗೂ ಬುಚ್ ವಿಲ್ಮೋರ್ ಅವರು ಮಾರ್ಚ್ 19ರಂದು ಭೂಮಿಗೆ ವಾಪಸಾಗುವ ಸಾಧ್ಯತೆಯಿದೆ.

ಈ ಇಬ್ಬರು ಗಗನಯಾನಿಗಳನ್ನು ಕರೆತರಲು ನಾಸಾದ ಕ್ರ್ಯೂ-10 ಮಿಷನ್‌ಅನ್ನು ಶುಕ್ರವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.

'ಕ್ರ್ಯೂ ಡ್ರ್ಯಾಗನ್' ಹೆಸರಿನ ಗಗನನೌಕೆಯನ್ನು ಹೊತ್ತುಕೊಂಡ ಸ್ಪೇಸ್‌ಎಕ್ಸ್‌ನ 'ಫಾಲ್ಕನ್‌ 9' ರಾಕೆಟ್ ಇಲ್ಲಿನ ಕೆನಡಿ ಸ್ಪೇಸ್ ಸೆಂಟರ್‌ನಿಂದ ಸ್ಥಳೀಯ ಕಾಲಮಾನ ಶುಕ್ರವಾರ ರಾತ್ರಿ 7.03ಕ್ಕೆ ನಭಕ್ಕೆ ಚಿಮ್ಮಿತು.

ಈ ಗಗನನೌಕೆಯಲ್ಲಿ ನಾಲ್ವರು ಗಗನಯಾನಿಗಳು ಐಎಸ್‌ಎಸ್‌ಗೆ ಪ್ರಯಾಣಿಸಿದ್ದಾರೆ. ನಾಸಾದ ಆಯನ್‌ ಮೆಕ್ಲೇನ್ ಮತ್ತು ನಿಕೋಲ್ ಆಯೆರ್ಸ್‌, ಜಪಾನ್‌ನ ತಕುಯಾ ಒನಿಶಿ ಹಾಗೂ ರಷ್ಯಾದ ಕಿರಿಲ್ ಪೆಸ್ಕೊವ್ ಅವರು ಐಎಸ್‌ಎಸ್‌ಗೆ ತೆರಳಿರುವ ಗಗನಯಾತ್ರಿಗಳು.

ಗಗನನೌಕೆಯು ಮರಳುವಾಗ ಸುನಿತಾ ಮತ್ತು ವಿಲ್ಮೋರ್‌ ಅಲ್ಲದೆ, ಐಎಸ್‌ಎಸ್‌ನಲ್ಲಿರುವ ನಿಕ್‌ ಹೇಗ್‌ ಮತ್ತು ಅಲೆಕ್ಸಾಂಡರ್‌ ಗೊರ್ಬನೊವ್ ಅವರನ್ನೂ ಕರೆತರಲಿದೆ. ಇವರಿಬ್ಬರು ನಾಸಾದ ಕ್ರ್ಯೂ-9 ಮಿಷನ್‌ನಲ್ಲಿ ಐಎಸ್‌ಎಸ್‌ಗೆ ತೆರಳಿದ್ದರು. ಎಲ್ಲ ಪ್ರಕ್ರಿಯೆಗಳೂ ನಿಗದಿತ ವೇಳಾಪಟ್ಟಿಯಂತೆ ಸಾಗಿದರೆ, ಗಗನನೌಕೆಯು ಬುಧವಾರ ಭೂಮಿಗೆ ಮರಳಲಿದೆ.

ಸುನಿತಾ ಹಾಗೂ ವಿಲ್ಮೋರ್‌ ಅವರು ಕಳೆದ ವರ್ಷ ಜೂನ್‌ 5ರಂದು, ಬೋಯಿಂಗ್‌ ಸಂಸ್ಥೆಯ ಸ್ಟಾರ್‌ಲೈನರ್ ಗಗನನೌಕೆಯಲ್ಲಿ ಐಎಸ್‌ಎಸ್‌ನತ್ತ ಪ್ರಯಾಣ ಬೆಳೆಸಿದ್ದರು. 8 ದಿನಗಳ ನಂತರ ಅವರು ಭೂಮಿಗೆ ಮರಳಬೇಕಿತ್ತು. ಆದರೆ, ಗಗನನೌಕೆಯಲ್ಲಿ ತಾಂತ್ರಿಕ ದೋಷ ಕಂಡುಬಂದ ಕಾರಣ ಅವರಿಗೆ ಮರಳಲು ಸಾಧ್ಯವಾಗದೆ ಅಲ್ಲೇ ಉಳಿದುಕೊಂಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries