ಚೆಂಗನ್ನೂರು: ಬಿಜೆಪಿ ರಾಜ್ಯ ಅಧ್ಯಕ್ಷರ ಸೂಚನೆಯ ಮೇರೆಗೆ ತಿರುವನ್ವಂದೂರು ಬ್ಲಾಕ್ ಪಂಚಾಯತ್ ಸದಸ್ಯೆ ಸುಜನ್ಯ ಗೋಪಿ ಅವರನ್ನು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಲಾಗಿದೆ ಎಂದು ಬಿಜೆಪಿ ಆಲಪ್ಪುಳ ದಕ್ಷಿಣ ಜಿಲ್ಲಾಧ್ಯಕ್ಷ ಸಂದೀಪ್ ವಾಚಸ್ಪತಿ ತಿಳಿಸಿದ್ದಾರೆ.
ಸುಜನ್ಯ ಅವರಿಗೆ ಬ್ಲಾಕ್ ಪಂಚಾಯತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸೂಚಿಸಲಾಗಿದೆ ಎಂದು ಸಂದೀಪ್ ವಾಚಸ್ಪತಿ ಮಾಧ್ಯಮಗಳಿಗೆ ಮಾಹಿತಿ ನೀಡಿರುವರು.
ಪಕ್ಷದ ಸೂಚನೆಯಂತೆ ಸುಜನ್ಯ ಅವರು ಬ್ಲಾಕ್ ಪಂಚಾಯತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಕಳೆದುಹೋದ ಎಟಿಎಂ ಕಾರ್ಡ್‍ನಿಂದ ಹಣವನ್ನು ಹಿಂಪಡೆದ ಪ್ರಕರಣದಲ್ಲಿ ಸುಜನ್ಯ ಮತ್ತು ಅವರ ಸಹಾಯಕ ಆಟೋ ಚಾಲಕ ಸಲೀಶ್ ಮೋನ್ ಅವರನ್ನು ಪೋಲೀಸರು ಬಂಧಿಸಿದ್ದಾರೆ. ಇಬ್ಬರೂ ರಿಮಾಂಡ್‍ನಲ್ಲಿದ್ದಾರೆ.





