ಕಾಸರಗೋಡು: ಇತಿಹಾಸ ಪ್ರಸಿದ್ಧ ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಎಡನೀರು ಶ್ರೀಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರ ನೇತೃತ್ವದಲ್ಲಿ ಜರಗಲಿದ್ದು, ಇದರ ಪ್ರಾರಂಭದ ಮುಹೂರ್ತ ಎಂಬಂತೆ ಏಪ್ರಿಲ್ 27ರಂದು ಶ್ರೀ ಕ್ಷೇತ್ರದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಬಲಿವಾಡು ಕೂಟ ಹಾಗೂ ಊರ ಪರವೂರ, ಭಕ್ತಾದಿಗಳ ಮಹಾಸಭೆ ಜರಗಲಿದೆ.
ಹರಿಹರ ಸಂಗಮ ಭೂಮಿಯಾಗಿರುವ ಶ್ರೀ ವಿಷ್ಣುಮಂಗಲ ಕ್ಷೇತ್ರ ಎಡನೀರು ಶ್ರೀಮಠ ಸ್ಥಾಪನೆಯಾಗುವ ಮೊದಲೇ ಅಸ್ತಿತ್ವದಲ್ಲಿತ್ತೆಂಬ ಐತಿಹ್ಯವಿದ್ದು, ಆದಿ ಶ್ರೀ ಶಂಕರಾಚಾರ್ಯರ ಶಿಷ್ಯರಾದ ಯತಿಗಳ ಸಂಗಮ ಸ್ಥಾನವಾಗಿಯೂ ಈ ಕ್ಷೇತ್ರ ಪ್ರಸಿದ್ಧಿಯನ್ನು ಪಡೆದಿದೆ.

