ಕಾಸರಗೋಡು: ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ವತಿಯಿಂದ ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿ ಸನ್ಮಾನ್ಯ ಡಿ. ಕೆ.ಶಿವಕುಮಾರ್ ಅವರನ್ನು ಬೆಂಗಳೂರಿನಲ್ಲಿ ಸನ್ಮಾನಿಸಲಾಯಿತು. ತೆಂಕುತಿಟ್ಟು ಯಕ್ಷಗಾನ ಶೈಲಿಯಲ್ಲಿ ಪ್ರದರ್ಶನ ನೀಡುವ ಪ್ರಪಂಚದ ಏಕೈಕ ಬೊಂಬೆಯಾಟ ಸಂಘದ ಸಾಧನೆಗಳ ಬಗ್ಗೆ ಡಿಕೆಶಿ ಸಂತಸವ್ಯಕ್ತಪಡಿಸಿದರು. ಕೇರಳ ರಾಜ್ಯದಲ್ಲಿದ್ದು ಬೊಂಬೆಯಾಟ ಸಂಘದ ಮೂಲಕ ಅಳಿವಿನ ಅಂಚಿನಲ್ಲಿರುವ ಕನ್ನಡ ಗಂಡುಕಲೆಯನ್ನು ಉಳಿಸುವ ಪ್ರಯತ್ನವನ್ನು ಶ್ಲಾಘಿಸಿದರು.
ಈ ಸಂದರ್ಭ ಸಂಘದ ನಿರ್ದೇಶಕ ಕೆ. ವಿ. ರಮೇಶ್ ಕಾಸರಗೋಡು, ಬಾಲಕೃಷ್ಣ ರಾವ್ ಪಿಲಿಕುಂಜೆ ಕಾಸರಗೋಡು, ತಾನೋಜಿ ರಾವ್ ಪವಾರ್, ಅಚಲ್ ರಾವ್ ಮೊದಲಾದವರು ಉಪಸ್ಥಿತರಿದ್ದರು.


