ತಿರುವನಂತಪುರಂ: ಕಳೆದ ಒಂದು ವಾರದಲ್ಲಿ ಸಂಚಾರ ನಿಯಮ ಉಲ್ಲಂಘನೆಗಾಗಿ ರಾಜ್ಯದಲ್ಲಿ ಒಟ್ಟು 32.49 ಲಕ್ಷ ರೂ. ದಂಡ ವಿಧಿಸಲಾಗಿದೆ. 84 ಪ್ರಕರಣಗಳು ದಾಖಲಾಗಿವೆ.
ಸರಕುಗಳ ಸಂಚಾರ ಸುಗಮಗೊಳಿಸಲು ಮತ್ತು ರಸ್ತೆ ಪ್ರಯಾಣವನ್ನು ಸುರಕ್ಷಿತವಾಗಿಸಲು ಕೇರಳ ಪೋಲೀಸರ ಸಂಚಾರ ಮತ್ತು ರಸ್ತೆ ಸುರಕ್ಷತಾ ನಿರ್ವಹಣಾ ವಿಭಾಗದ ನೇತೃತ್ವದಲ್ಲಿ ರಾಜ್ಯಾದ್ಯಂತ ನಡೆಯುತ್ತಿರುವ ತಪಾಸಣೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ಏಪ್ರಿಲ್ 8 ರಿಂದ 14 ರವರೆಗಿನ ಏಳು ದಿನಗಳ ತಪಾಸಣೆ ಅವಧಿಯಲ್ಲಿ 40,791 ವಾಹನಗಳನ್ನು ತಪಾಸಣೆ ಮಾಡಲಾಗಿದ್ದು, 10,227 ಸಂಚಾರ ಉಲ್ಲಂಘನೆಗಳನ್ನು ಪತ್ತೆಹಚ್ಚಲಾಗಿದೆ.
ರಾಜ್ಯ ಹೆದ್ದಾರಿಗಳಲ್ಲಿ 3760, ರಾಷ್ಟ್ರೀಯ ಹೆದ್ದಾರಿಗಳಲ್ಲಿ 2973 ಮತ್ತು ಇತರ ಹೆದ್ದಾರಿಗಳಲ್ಲಿ 3494 ಪ್ರಕರಣಗಳಲ್ಲಿ ನಿಯಮ ಉಲ್ಲಂಘನೆಗಳು ನಡೆದಿರುವುದು ಕಂಡುಬಂದಿದೆ.
ಅಜಾಗರೂಕ ಚಾಲನೆ ಮತ್ತು ವೇಗಕ್ಕಾಗಿ 1211 ಜನರಿಗೆ ಮತ್ತು ಅಕ್ರಮ ಪಾರ್ಕಿಂಗ್‍ಗಾಗಿ 6685 ಜನರಿಗೆ ದಂಡ ವಿಧಿಸಲಾಗಿದೆ.


