ಬ್ರುಸೆಲ್ಸ್: ಯುರೋಪ್ ರಾಷ್ಟ್ರಗಳಿಗೆ ವಲಸೆ ಬರುವವರ ವಿಚಾರಕ್ಕೆ ಸಂಬಂಧಿಸಿ ಭಾರತ ಸೇರಿ 7 'ಸುರಕ್ಷಿತ ದೇಶ'ಗಳ ಹೆಸರು ಇರುವ ಪಟ್ಟಿಯನ್ನು ಐರೋಪ್ಯ ಒಕ್ಕೂಟ ಬುಧವಾರ ಪ್ರಕಟಿಸಿದೆ.
ಭಾರತ, ಕೊಸೋವೊ, ಬಾಂಗ್ಲಾದೇಶ, ಕೊಲಂಬಿಯಾ, ಈಜಿಪ್ಟ್, ಮೊರಾಕ್ಕೊ ಮತ್ತು ಟುನೀಷಿಯಾ ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ವಲಸಿಗರನ್ನು ವಾಪಸ್ ಕಳಿಸುವ ಪ್ರಕ್ರಿಯೆಗೆ ವೇಗ ನೀಡುವ ಸಲುವಾಗಿ ಒಕ್ಕೂಟ ಈ ಪಟ್ಟಿಯನ್ನು ಸಿದ್ಧಪಡಿಸಿದೆ.




