ನವದೆಹಲಿ : ಜಪಾನ್‌ನ ರಾಯಭಾರಿ ಕಚೇರಿ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ಹಿರಿಯ ಪ್ರಾಧ್ಯಾಪಕರೊಬ್ಬರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
ಇದೊಂದೇ ಪ್ರಕರಣವಲ್ಲದೆ ಈ ಹಿಂದೆಯೂ ಇಂತಹ ಹಲವು ಆರೋಪಗಳು ಈ ಪ್ರಾಧ್ಯಾಪಕರ ವಿರುದ್ಧ ಕೇಳಿಬಂದಿದ್ದವು.
'ಕಾಮಪಿಪಾಸುಗಳು, ಭ್ರಷ್ಟಾಚಾರಿಗಳು ಹಾಗೂ ಮಧ್ಯವರ್ತಿಗಳ ವಿಚಾರದಲ್ಲಿ ಆಡಳಿತವು ಶೂನ್ಯ ಸಹಿಷ್ಣುತೆಯನ್ನು ಹೊಂದಿದೆ' ಎಂದು ಜೆಎನ್‌ಯು ವಿವಿಯ ಕುಲಪತಿ ಶಾಂತಿಶ್ರೀ ಧುಲೀಪುಡಿ ಪಂಡಿತ್ ತಿಳಿಸಿದ್ದಾರೆ.




