ತಿರುವನಂತಪುರಂ: ಹೊಸ ಮದ್ಯ ನೀತಿಗೆ ಸಂಪುಟ ಸಭೆ ಅನುಮೋದನೆ ನೀಡಿದೆ. ಬುಧವಾರ ನಡೆದ ಸಚಿವ ಸಂಪುಟ ಸಭೆಯು ಪರಿಷ್ಕøತ ಮದ್ಯ ನೀತಿಗೆ ಅನುಮೋದನೆ ನೀಡಿತು, ಇದರಲ್ಲಿ ಪ್ರವಾಸಿ ಋತುವಿನ ಮೊದಲ ದಿನದಂದು ಮೂರು ನಕ್ಷತ್ರಗಳಿಗಿಂತ ಹೆಚ್ಚಿನ ಹೋಟೆಲ್‍ಗಳಲ್ಲಿ ಮದ್ಯವನ್ನು ಪೂರೈಸಲು ಅವಕಾಶ ನೀಡಲಾಗಿದೆ.
ಮದುವೆ ಮತ್ತು ಅಂತರರಾಷ್ಟ್ರೀಯ ಸಮ್ಮೇಳನಗಳನ್ನು ಆಯೋಜಿಸುವ ಹೋಟೆಲ್‍ಗಳಿಗೆ ವಿನಾಯಿತಿ ನೀಡಲಾಗಿದೆ. ಈ ಸ್ಥಳಗಳಲ್ಲಿ ಮದ್ಯ ವಿತರಿಸಲು, ಸಮಾರಂಭದ ಮುಂಚಿತವಾಗಿ ಅಬಕಾರಿ ಆಯುಕ್ತರಿಂದ ಅನುಮತಿ ಪಡೆಯಬೇಕು.
ವಿಶೇಷ ಅನುಮತಿ ದಿನಗಳಲ್ಲಿ ಬಾರ್ ತೆರೆಯುವಂತಿಲ್ಲ. ಕಾರ್ಯಕ್ರಮಗಳಲ್ಲಿ ಮಾತ್ರ ಮದ್ಯವನ್ನು ಪೂರೈಸಬಹುದು ಎಂದು ನಿರ್ದೇಶನದಲ್ಲಿ ಹೇಳಲಾಗಿದೆ. ಪಂಚತಾರಾ ಸೌಲಭ್ಯವಿರುವ ಹಡಗುಗಳಲ್ಲಿಯೂ ಮದ್ಯವನ್ನು ನೀಡÀಬಹುದು. ಹಡಗುಗಳಿಗೆ ಬಾರ್ ಪರವಾನಗಿಗಳನ್ನು ನೀಡಲಾಗುವುದು. ಅಂಗಡಿಗಳಿಗೆ 400 ಮೀಟರ್ ದೂರದ ಮಿತಿ ಮುಂದುವರಿಯುತ್ತದೆ.


