ಕೋಝಿಕ್ಕೋಡ್: ಮಂಜೇಶ್ವರದ ಮಾಜಿ ಶಾಸಕ ಮತ್ತು ಮುಸ್ಲಿಂ ಲೀಗ್ ನಾಯಕ ಎಂ.ಸಿ. ಕಮರುದ್ದೀನ್ ಮತ್ತು ಫ್ಯಾಷನ್ ಗೋಲ್ಡ್ ಎಂಡಿ ಟಿ.ಕೆ. ಪೂಕೋಯ ತಂಙಳ್ ಮತ್ತು ಇತರರು ಜಾರಿ ನಿರ್ದೇಶನಾಲಯದ (ಇ.ಡಿ) ವಶದಲ್ಲಿದ್ದಾರೆ.
ಅಕ್ರಮ ಹಣದ ವಹಿವಾಟು ಪತ್ತೆಯಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಎರಡು ದಿನಗಳ ಹಿಂದೆ ಜಾರಿ ನಿರ್ದೇಶನಾಲಯ (ಇಡಿ) ಇಬ್ಬರನ್ನೂ ವಶಕ್ಕೆ ಪಡೆದಿತ್ತು.
ಮಲಬಾರ್ ಫ್ಯಾಷನ್ ಗೋಲ್ಡ್ ಜ್ಯುವೆಲ್ಲರಿ ವ್ಯವಹಾರಕ್ಕೆ ಸಂಬಂಧಿಸಿದಂತೆ. ಕೇರಳದ ವಿವಿಧ ಪೋಲೀಸ್ ಠಾಣೆಗಳಲ್ಲಿ ಎಂ.ಸಿ. ಕಮರುದ್ದೀನ್ ಮತ್ತು ಪೂಕ್ಕೋಯ ತಂಙಳ್ ವಿರುದ್ಧ 210 ಪ್ರಕರಣಗಳು ಬಾಕಿ ಇವೆ. ಈ ಪ್ರಕರಣಗಳಲ್ಲಿ ತನಿಖೆಗಳು ನಡೆಯುತ್ತಿವೆ. ಹೆಚ್ಚಿನ ಪ್ರಕರಣಗಳಲ್ಲಿ ಆರೋಪಪಟ್ಟಿಗಳನ್ನು ಸಲ್ಲಿಸಲಾಗಿದೆ.
ಈ ಪ್ರಕರಣಗಳ ನಂತರ ಜಾರಿ ನಿರ್ದೇಶನಾಲಯ ನಡೆಸಿದ ತನಿಖೆಯಲ್ಲಿ, ಇಬ್ಬರೂ ಹಣ ವರ್ಗಾವಣೆಯಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಇದೇ ಕಾರಣಕ್ಕಾಗಿ ಇಡಿ ಅವರಿಬ್ಬರ ಬಂಧನವನ್ನು ದಾಖಲಿಸಿಕೊಂಡಿದೆ. 7 ರಂದು ಬಂಧಿಸಲ್ಪಟ್ಟ ಇಬ್ಬರನ್ನು ನಿನ್ನೆ ಕೋಝಿಕ್ಕೋಡ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.
ಪ್ರಕರಣದಲ್ಲಿ ಹೆಚ್ಚಿನ ವಿಚಾರಣೆಗಾಗಿ ಇಡಿ ಅವರನ್ನು ಎರಡು ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಕೋರಿತ್ತು. ನಂತರ ನ್ಯಾಯಾಲಯ ಇಬ್ಬರನ್ನೂ ಇಡಿ ಕಸ್ಟಡಿಗೆ ಒಪ್ಪಿಸಿತು.


