2025 ರ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಟಾಟಾ ಮೋಟಾರ್ಸ್ ಗ್ರೂಪ್‌ನ ಜಾಗತಿಕ ಮಾರಾಟಗಳು ಜಾಗ್ವಾರ್ ಲ್ಯಾಂಡ್ ರೋವರ್ ಸೇರಿದಂತೆ, 3,66,177 ಕಾರುಗಳು ಮಾರಾಟವಾಗಿವೆ. 2024 ರ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ3 ರಷ್ಟು ಕಡಿಮೆಯಾಗಿದೆ.
2025 ರ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಟಾಟಾ ಮೋಟಾರ್ಸ್‌ನ ಎಲ್ಲಾ ವಾಣಿಜ್ಯ ವಾಹನಗಳು ಮತ್ತು ಟಾಟಾ ಡೇವೂ ಶ್ರೇಣಿಯ ವಾಹನಗಳು ಜಾಗತಿಕವಾಗಿ 1,07,765 ಯೂನಿಟ್‌ಗಳು ಮಾರಾಟವಾಗಿವೆ. 2024 ರ ನಾಲ್ಕನೇ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ3 ರಷ್ಟು ಕಡಿಮೆಯಾಗಿದೆ ಎಂದು ಟಾಟಾ ಮೋಟಾರ್ಸ್ ತಿಳಿಸಿದೆ.
2025 ರ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಟಾಟಾ ಮೋಟಾರ್ಸ್ ಜಾಗತಿಕವಾಗಿ 1,46,999 ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡಿದೆ. 2024 ರ ನಾಲ್ಕನೇ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ6 ರಷ್ಟು ಕಡಿಮೆಯಾಗಿದೆ. ಜಾಗ್ವಾರ್ ಲ್ಯಾಂಡ್ ರೋವರ್‌ನ ಜಾಗತಿಕ ಮಾರಾಟವು 1,11,413 ವಾಹನಗಳಾಗಿದ್ದು, ಇದು Q4 FY24 ಕ್ಕೆ ಹೋಲಿಸಿದರೆ ಶೇ1 ರಷ್ಟು ಹೆಚ್ಚಾಗಿದೆ.
ದೇಶಿಯ ವಾಹನಗಳ ಮಾರಾಟ: ಟಾಟಾ ಮೋಟಾರ್ಸ್ ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 2024-25ನೇ ಸಾಲಿನ ಆರ್ಥಿಕ ವರ್ಷದಲ್ಲಿ 2,52,642 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ. 2023-24ನೇ ಸಾಲಿನ ಆರ್ಥಿಕ ವರ್ಷದಲ್ಲಿ 2,65,090 ಯುನಿಟ್ ವಾಹನಗಳು ಮಾರಾಟವಾಗಿದ್ದವು. ಮಾರ್ಚ್ 2025 ರಲ್ಲಿ MH&ICV (ಮಧ್ಯಮ ಮತ್ತು ಭಾರೀ ವಾಣಿಜ್ಯ ವಾಹನಗಳು) ಯ ದೇಶೀಯ ಮಾರಾಟವು 20,474 ಯುನಿಟ್ ವಾಹನಗಳಾಗಿದ್ದು, ಮಾರ್ಚ್ 2024 ರಲ್ಲಿ 19,976 ಯುನಿಟ್‌ಗಳು ಮಾರಾಟವಾಗಿದ್ದವು.
ಎಸ್‌ಯುವಿಗಳು ಎರಡಂಕಿಯ ಬೆಳವಣಿಗೆಯೊಂದಿಗೆ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸುವುದನ್ನು ಮುಂದುವರೆಸಿವೆ, ಹೊಸ ಕಾರು ಮಾರಾಟದಲ್ಲಿ ಶೇ55 ರಷ್ಟಿದ್ದವು. ಪರಿಸರ ಸ್ನೇಹಿ ಸಿಎನ್‌ಜಿ ವಾಹನಗಳಿಗೆ ಆದ್ಯತೆ ನೀಡಿದ್ದು ಶೇ35 ರಷ್ಟು ಏರಿಕೆಯಾಗಿದೆ. ಏರಿಳಿತದ ಬೇಡಿಕೆಯಿಂದ ಗುರುತಿಸಲ್ಪಟ್ಟ ಸವಾಲಿನ ವರ್ಷದ ನಡುವೆ, ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ 64,726 ಯುನಿಟ್ ಇವಿಗಳು ಸೇರಿದಂತೆ 5,56,263 ಯುನಿಟ್‌ಗಳ ಸಗಟು ಮಾರಾಟವನ್ನು ಸಾಧಿಸಿದೆ.
ಟಾಟಾ ಮೋಟಾರ್ಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕ ಗಿರೀಶ್ ವಾಘ್ ಮಾತನಾಡಿ, "ಹಿಂದಿನ ವರ್ಷಕ್ಕೆ ಹೋಲಿಸಿದರೆ ಬೇಡಿಕೆ ಕುಸಿತದ ನಂತರ, ಆರ್ಥಿಕ ವರ್ಷ 2024-25 ರಲ್ಲಿ ವಾಣಿಜ್ಯ ವಾಹನ ಉದ್ಯಮ ಸಕಾರಾತ್ಮಕ ಟಿಪ್ಪಣಿಯೊಂದಿಗೆ ಕೊನೆಗೊಂಡಿದೆ. ಟಾಟಾ ಮೋಟಾರ್ಸ್ ವಾಣಿಜ್ಯ ವಾಹನಗಳು 3,76,903 ಯುನಿಟ್‌ಗಳ ಸಗಟು ಮಾರಾಟವನ್ನು ದಾಖಲಿಸಿದೆ.
ಹಸಿರು, ಭವಿಷ್ಯಕ್ಕೆ ಸಿದ್ಧವಾದ ತಂತ್ರಜ್ಞಾನಗಳಿಗೆ ನಮ್ಮ ಬದ್ಧತೆಯನ್ನು ಬಲಪಡಿಸುತ್ತಾ, ನಾವು ಭಾರತದ ಮೊದಲ ಹೈಡ್ರೋಜನ್ - ಚಾಲಿತ ಹೆವಿ - ಡ್ಯೂಟಿ ಟ್ರಕ್ ಪ್ರಯೋಗಗಳನ್ನು ಪ್ರಾರಂಭಿಸಿದ್ದೇವೆ. ಮತ್ತೊಂದೆಡೆ ನಮ್ಮ ಇ - ಬಸ್ ಫ್ಲೀಟ್ ಒಟ್ಟಾಗಿ ರಾಷ್ಟ್ರವ್ಯಾಪಿ 30 ಕೋಟಿ ಕಿ.ಮೀ.ಗಿಂತ ಹೆಚ್ಚು ಕ್ರಮಿಸಿದೆ ಎಂದರು.
Q4 FY25 ರಲ್ಲಿ, ಸತತ ತ್ರೈಮಾಸಿಕಗಳಲ್ಲಿ ಮಾರಾಟ ಪ್ರಮಾಣದಲ್ಲಿ ನಿರಂತರ ವಾರ್ಷಿಕ ಸುಧಾರಣೆಯು ಟ್ರಕ್ ಗಳು ಮತ್ತು ಪ್ರಯಾಣಿಕ ವಾಹಕಗಳು ಎರಡೂ ವಾರ್ಷಿಕ ಪ್ರವೃತ್ತಿಗೆ ಅನುಗುಣವಾಗಿ ಆರೋಗ್ಯಕರ ಬೆಳವಣಿಗೆಯನ್ನು ದಾಖಲಿಸುವುದರೊಂದಿಗೆ ಮತ್ತಷ್ಟು ವೇಗವನ್ನು ಪಡೆದುಕೊಂಡಿವೆ ಎಂದು ನಿರ್ದೇಶಕ ಗಿರೀಶ್ ವಾಘ್ ಹೇಳಿದರು.




