HEALTH TIPS

ಕೇರಳ ಮುಖ್ಯಮಂತ್ರಿ ವಿರುದ್ಧ ಸಿಬಿಐ ತನಿಖೆ ಕೋರಿ ಪಿಐಎಲ್‌

ಕೊಚ್ಚಿ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಖಾಸಗಿ ಗಣಿ ಕಂಪನಿ ಸಿಎಂಆರ್‌ಎಲ್‌ನಿಂದ ಕಿಕ್‌ಬ್ಯಾಕ್‌ ಪಡೆದಿದ್ದಾರೆಂದು ಆರೋಪಿಸಿ, ಸಿಬಿಐ ತನಿಖೆಗೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್‌) ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್‌, ಕೇಂದ್ರ ಸರ್ಕಾರ ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರಿಗೆ ನೋಟಿಸ್‌ ನೀಡಿ, ಪ್ರತಿಕ್ರಿಯೆ ಕೇಳಿದೆ.

ಪತ್ರಕರ್ತ ಎಂ.ಆರ್.ಅಜಯನ್ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಅಮಿತ್‌ ರಾವಲ್ ಮತ್ತು ಪಿ.ಎಂ.ಮನೋಜ್ ಅವರಿದ್ದ ಪೀಠವು ವಿಚಾರಣೆ ನಡೆಸಿತು. ಮುಖ್ಯಮಂತ್ರಿ ಪುತ್ರಿ ವೀಣಾ ವಿಜಯನ್, ಸದ್ಯ ಕಾರ್ಯಸ್ಥಗಿತಗೊಂಡಿರುವ ಅವರ ಐಟಿ ಕಂಪನಿ ಎಕ್ಸಾಲಾಜಿಕ್, ಖಾಸಗಿ ಗಣಿ ಕಂಪನಿ ಸಿಎಂಆರ್‌ಎಲ್ ವ್ಯವಸ್ಥಾಪಕ ನಿರ್ದೇಶಕರಾದ ಶಶಿಧರನ್ ಕಾರ್ತ, ಅವರ ಪುತ್ರ, ಪುತ್ರಿ, ಅಳಿಯ ಮತ್ತು ಸೆಬಿ ಸೇರಿದಂತೆ ಹಲವರಿಗೂ ಕೋರ್ಟ್‌ ನೋಟಿಸ್ ನೀಡಿದೆ.

ಸಿಎಂಆರ್‌ಎಲ್‌ನ(ಕೊಚಿನ್‌ ಮಿನರಲ್ಸ್ ಅಂಡ್ ರುಟೈಲ್ ಲಿಮಿಟೆಡ್) ಆದಾಯ ತೆರಿಗೆ ಪ್ರಕ್ರಿಯೆಯಲ್ಲಿ ನಮೂದಿಸಿದ್ದವರ ಪಟ್ಟಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ 'ಮಧ್ಯಂತರ ಇತ್ಯರ್ಥ ಮಂಡಳಿ'ಗೂ ಸೂಚಿಸಿ, ವಿಚಾರಣೆಯನ್ನು ಮೇ 27ಕ್ಕೆ ಮುಂದೂಡಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries