ಕೊಲ್ಲಂ: ವಿದೇಶಗಳಲ್ಲಿ ನರ್ಸಿಂಗ್ ಉದ್ಯೋಗದ ಭರವಸೆ ನೀಡಿ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣದಲ್ಲಿ ಸುವಾರ್ತಾ ಬೋಧಕ ಕಾರ್ಯಕರ್ತನನ್ನು ಬಂಧಿಸಲಾಗಿದೆ.
ಕೊಟ್ಟಾಯಂನ ಪಂಪಾಡಿ ಮೂಲದ ಜಾಲಿ ವರ್ಗೀಸ್ ಅವರನ್ನು ಆಂಚಲ್ ಪೋಲೀಸ್ ವಿಶೇಷ ತನಿಖಾ ತಂಡ ಕೊಲ್ಲಂನಲ್ಲಿ ಬಂಧಿಸಿದೆ.
ಚಂಗನಶ್ಶೇರಿಯ ಪಾಯಿಪ್ಪಡ್ ಮೂಲದ ಪಾದ್ರಿ ಥಾಮಸ್ ರಾಜನ್ ಅವರನ್ನು ಈ ಹಿಂದೆ ಇದೇ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಇಬ್ಬರು ಶಂಕಿತರು ತಲೆಮರೆಸಿಕೊಂಡಿದ್ದಾರೆ. ಅವರನ್ನು ಪತ್ತೆ ಮಾಡಲು ಪೋಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಮಣ್ಣೂರು ನಿವಾಸಿಗಳು ನೀಡಿದ ದೂರಿನ ಮೇರೆಗೆ ಬಂಧಿಸಲಾಗಿದೆ. ಹಲವು ಜನರು ವಂಚನೆಗೊಳಗಾಗಿದ್ದಾರೆ ಎಂದು ವರದಿಯಾಗಿದೆ.





