ಉಪ್ಪಳ: ಮಂಗಲ್ಪಾಡಿ ಚೆರುಗೋಳಿ ಚೀರುಂಬಾ ಭಗವತಿ ದೇವಸ್ಥಾನದಲ್ಲಿ ನಡಾವಳಿ ಉತ್ಸವವು ಕೊಂಡೆವೂರು ಯೋಗಾನಂದ ಸರಸ್ವತಿ ಸ್ವಾಮಿಗಳ ಮಾರ್ಗದರ್ಶನದಲ್ಲಿ ದೇವಸ್ಥಾನದ ರಾಜಮನೆತನದ ಬಂಗಾಡಿ ಅರಮನೆ ಶತಾಯುಷಿ ವಿ.ರವಿರಾಜ ಬಲ್ಲಾಳ ಅವರ ನೇತೃತ್ವ ಹಾಗೂ ತಂತ್ರಿ ಬ್ರಹ್ಮಶ್ರೀ ಬಂಬ್ರಾಣ ಶಂಕರ ನಾರಾಯಣ ಕಡಮಣ್ಣಾಯ ಅವರ ಪೌರೋಹಿತ್ಯದಲ್ಲಿ ಏ. 11ಹಾಗೂ 12ರಂದು ನಡೆಯಲಿರುವುದಾಗಿ ಆಚರಣಾ ಸಮಿತಿ ಪದಾಧಿಕಾರಿ, ನಿವೃತ್ತ ತಹಶೀಲ್ದಾರ್ ಕೆ. ಶಶಿಧರ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
10ರಂದು ಬೆಳಗ್ಗೆ 7ಕ್ಕೆ ತಂತ್ರಿ ಬ್ರಹ್ಮಶ್ರೀ ಬಂಬ್ರಾಣ ಶಂಕರ ನಾರಾಯಣ ಕಡಮಣ್ಣಾಯ ಅವರಿಗೆ ಪೂರ್ಣಕುಂಭ ಸ್ವಾಗತ, ಗಣಪತಿ ಹೋಮ, ಚಂಡಿಕಾ ಹೋಮ, ಅಷ್ಟಾವಧಾನ ಸೇವೆ, ಮಧ್ಯಾಹ್ನ 3ಕ್ಕೆ ಸಾಂಸ್ಕøತಿಕ ಕಾರ್ಯಕ್ರಮ ಜರುಗಲಿದ್ದು, ಬಟ್ಯ ಮುತ್ತಚೆಟ್ಟಿಯಾರ್ ಸಮಾರಂಭದಲ್ಲಿ ದೀಪ ಬೆಳಗಿಸುವರು. ಉಪ್ಪಳ ಕೊಂಡೆವೂರು ಯೋಗಾಶ್ರಮದ ಸ್ವಾಮಿ ಯೋಗಾನಂದ ಸರಸ್ವತಿ ಆಶೀರ್ವಚನ ನೀಡಲಿದ್ದಾರೆ. ರಾಜ್ಯಸಭಾ ಸದಸ್ಯ ಡಾ.ಕೆ.ನಾರಾಯಣ ಬೆಂಗಳೂರು, ಡಾ.ಸದಾಶಿವ ಶೆಟ್ಟಿ ಕುಳೂರು, ಡಾ.ಮೋಹನದಾಸ್ ಬೆಂಗಳೂರು, ಮತ್ತು ಡಾ.ಮಂಜುನಾಥ ಶೆಟ್ಟಿ ಅವರನ್ನು ಅಭಿನಂದಿಸಲಾಗುವುದು.
7 ರಂದು ನಾಡಾವಳಿ ಹಬ್ಬದ ಪ್ರಾರ್ಥನೆ, 7.30 ಕ್ಕೆ ಭಂಡಾರ ಘೋಷಯಾತ್ರೆ, 9.00 ಕ್ಕೆ ನೃತ್ಯೋತ್ಸವ, 10ಕ್ಕೆ ವಿಷ್ಣುಮೂರ್ತಿ ಕುಳಿಚ್ಚಾಟ ನಡೆಯಲಿದೆ. 12ರಂದು ಬೆಳಗ್ಗೆ 9.30ಕ್ಕೆ ವಿಷ್ಣುಮೂರ್ತಿ, 11.30ಕ್ಕೆ ಚಪ್ಪರಮದುವೆ, ತುಲಾಭಾರ, ಭಗವತಿ-ವಿಷ್ಣುಮೂರ್ತಿಗಳ ಭೇಟಿ, 12.30ಕ್ಕೆ ಧಾರ್ಮಿಕ ಸಭೆ, ಮಧ್ಯಾಹ್ನ 2.30ಕ್ಕೆ ಮಲರಾಯಿ, ಬಂಟ ದೇವತೆಗಳ ನೇಮೋತ್ಸವ, 5ಕ್ಕೆ ಗುಳಿಗ ಕೋಲ ನಡೆಯುವುದು.
ಏ.14ರಂದು ವಿಷು ಸಂಕ್ರಮಣ. 15 ಕ್ಕೆ ಮಂಗಳ ಬೆಳಕು ನಡೆಯುವುದು. ಸುದ್ದಿಗೋಷ್ಠಿಯಲ್ಲಿ ನಾರಾಯಣ ಪಟ್ಲ, ಯು.ಪಾಂಡುರಂಗ, ಪುರುಷೋತ್ತಮ ಆಯಾಳ, ಸುಧಾಕರ ಕಾಸರಗೋಡು ಉಪಸ್ಥಿತರಿದ್ದರು.

