ಕಾಸರಗೋಡು : ಎರಡನೇ ಪಿಣರಾಯಿ ವಿಜಯನ್ ಸರ್ಕಾರದ ನಾಲ್ಕನೇ ವರ್ಷಾಚರಣೆ ಅಂಗವಾಗಿ, ಕಾಲಿಕಡವು ಮೈದಾನದಲ್ಲಿ ಎಪ್ರಿಲ್ 21ರಿಂದ 27 ರವರೆಗೆ ನಡೆಯಲಿರುವ ಪ್ರದರ್ಶನ ಮತ್ತು ಮಾರುಕಟ್ಟೆ ಮೇಳದ ಭಾಗವಾಗಿ ಸರಕಾರಿ ನೌಕರರು ಮತ್ತು ಸಾರ್ವಜನಿಕರಿಗಾಗಿ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಯಿತು.
ಕಾಸರಗೋಡು ಕಲೆಕ್ಟರೇಟ್ ಮಿನಿ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಾರ್ತಾ ಇಲಾಖೆ ಸಹಾಯಕ ಸಂಪಾದಕಿ ಎ.ಪಿ. ದಿಲ್ನಾ ಉಪಸ್ಥಿತರಿದ್ದರು. ಪದ್ಮನಾಭನ್ ಕಾಡಕಂ ರಸಪ್ರಶ್ನೆ ಸಮನ್ವಯಕಾರರಾಗಿದ್ದರು. ಸ್ಪರ್ಧೆಯಲ್ಲಿ ಕರಿಚ್ಚೇರಿಯ ಅಭಿಜಿತ್ ಕೆ ನಾಯರ್ ಪ್ರಥಮ ಮತ್ತು ಜಿಎಸ್‍ಟಿ ಇಲಾಖೆ ಉದ್ಯೋಗಿ ವಿ.ಎಂ. ಸತೀಶನ್ ವಯಂಬ್ ದ್ವಿತೀಯ ಸ್ಥಾನ ಪಡೆದರು. ಪ್ರದರ್ಶನ ಮತ್ತು ಮಾರುಕಟ್ಟೆ ಮೇಳದ ಸಮಾರೋಪ ದಿನದಂದು ಕಾಲಿಕಡವು ಮೈದಾನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುವುದು.

