ಕಾಸರಗೋಡು: ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಬುಧವಾರ ಸಂಜೆ ಉತ್ತಮ ಮಳೆಯಾಗಿದೆ. ಕಾಸರಗೋಡು, ಮಧೂರು, ಬದಿಯಡ್ಕ, ಪೆರ್ಲ ಸೇರಿದಂತೆ ವಿವಿಧೆಡೆ ಸಾಮಾನ್ಯ ಮಳೆಯಾಗಿದೆ. ಹಗಲು ಹೊತ್ತಿನಲ್ಲಿ ಪ್ರಖರ ಬಿಸಿಲಿನ ಹವಾಮಾನವಿದ್ದು, ಸಂಜೆಯಾಗುತ್ತಿದ್ದಂತೆ ದಟ್ಟನೆ ಮೋಡ ಅವರಿಸಿ, ಗಾಳಿಯೊಂದಿಗೆ ಮಳೆ ಸುರಿದಿದೆ. ಸಂಜೆಯ ವೇಳೆಗೆ ಬಿರುಸಿನನ ಮಳೆಯಾಗಿದ್ದು, ನಂತರ ರಾತ್ರಿ ವರೆಗೂ ಹನಿಮಳೆ ಸುರಿಯತೊಡಗಿದೆ. ಬಿಸಿಲಿನಿಂದ ಕಂಗೆಟ್ಟಿದ್ದ ಜನತೆಗೆ ಏಕಾಏಕಿ ಸುರಿದ ಮಳೆಯಿಂದ ತಂಪಿನ ಅನುಭವ ಉಂಟಾಗಿದೆ.

