ಕಾಸರಗೋಡು: ಬೆಂಗಳೂರು ಸಿಬಿಐ ಘಟಕಕ್ಕೆ ಡೆಪ್ಯೂಟೇಷನ್‍ನಲ್ಲಿ ವರ್ಗಾವಣೆಗೊಂಡು ತೆರಳುತ್ತಿರುವ ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ಶಿಲ್ಪಾ ಅವರಿಗೆ ಪೆÇೀಲೀಸ್ ಅಸೋಸಿಯೇಷನ್ ವತಿಯಿಂದ ಬೀಳ್ಕೊಡುಗೆ ನೀಡಲಾಯಿತು. ಎಎಸ್ಪಿ ಪಿ.ಬಾಲಕೃಷ್ಣನ್ ಸ್ಮರಣಿಕೆ ನೀಡಿದರು.
ಪೊಲೀಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಬಿ.ರಾಜಕುಮಾರ್ ಅಧ್ಯಕ್ಷತೆ ವಹಿಸಿದರು. ಡಿವೈಎಸ್ಪಿಗಳಾದ ಸಿ.ಕೆ.ಸುನಿಲ್ ಕುಮಾರ್, ಟಿ.ಉತ್ತಮ್ ದಾಸ್, ಪೊಲೀಸ್ ಆಫೀಸರ್ಸ್ ಅಸೋಸಿಯೇಷನ್ ರಾಜ್ಯ ಸಮಿತಿಯ ಪ್ರತಿನಿಧಿ ಎಂ.ಸದಾಶಿವನ್, ಜಿಲ್ಲಾ ಉಪಾಧ್ಯಕ್ಷ ಎಸ್.ಐ ಶ್ರೀದಾಸ್, ಜಿಲ್ಲಾ ಕಾರ್ಯದರ್ಶಿ ಎ.ಪಿ.ಸುರೇಶ್, ಬಿ.ರಾಜೇಶ್ ಕುಮಾರ್ ಅವರು ಪೆÇೀಲೀಸ್ ವರಿಷ್ಠಾಧಿಕಾರಿಯ ಸಾರಥ್ಯವನ್ನು ಪ್ರಶಂಸಿಸಿ ಮಾತನಾಡಿದರು. ಆಫೀಸರ್ಸ್ ಅಸೋಸಿಯೇಷನ್ ಜಿಲ್ಲಾ ಕಾರ್ಯದರ್ಶಿ ಪಿ.ರವೀಂದ್ರನ್ ಸ್ವಾಗತಿಸಿದರು. ಪಿ.ವಿ.ಸುಧೀಷ್ ವಂದಿಸಿದರು. ಪೆÇಲೀಸ್ ಇಲಾಖೆಯ ಸಹ ಸಿಬಂದಿಯ ಕಾರ್ಯದಕ್ಷತೆಯ ಸಹಕಾರಕ್ಕೆ ನಿರ್ಗಮಿತ ಎಸ್.ಪಿ ಡಿ ಶಿಲ್ಪ ತಮ್ಮ ಅಬಿನಂದನೆ ಸಲ್ಲಿಸಿದರು.
ಡಿ.ಶಿಲ್ಪ ಅವರಿಂದ ತೆರವಾಗಿರುವ ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಗೆ ಕಣ್ಣೂರು ರೂರಲ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನೂಜ್ ಪಾಲಿವಾಲ್ ಅವರನ್ನು ನೇಮಿಸಲಾಗಿದೆ.


