ಕಾಯಂಕುಳಂ: ಒಂದು ವರ್ಷದ ಹಿಂದೆ ಕಳೆದುಹೋದ ಮೊಬೈಲ್ ಪೋನ್ ಅನ್ನು ಪೋಲೀಸರು ಪತ್ತೆ ಮಾಡಿ ಹಿಂದಿರುಗಿಸಿ ಕರ್ತವ್ಯ ಮೆರೆದ ಘಟನೆ ವರದಿಯಾಗಿದೆ. ಕಾಯಂಕುಳಂ ಪೆÇಲೀಸರು ಭರಣಿಕಾವು ಗ್ರಾಮದಲ್ಲಿ ವಾಸಿಸುವ ಬೇಬಿ ಶಾಲಿನಿಯ ಮೊಬೈಲ್ ಪೋನ್ ಅನ್ನು ಹುಡುಕಿ, ಪತ್ತೆ ಮಾಡಿ ಹಿಂದಿರುಗಿಸಿದರು, ಅದು ಒಂದು ವರ್ಷದ ಹಿಂದೆ ಕಳೆದುಹೋಗಿತ್ತು. ಅದು ಸುಮಾರು 25,000 ರೂ. ಬೆಲೆಬಾಳುವ ಮೊಬೈಲ್ ಪೋನ್ ಆಗಿತ್ತು.
ಕಳೆದುಹೋದ ಮೊಬೈಲ್ ಪೋನ್ ಅನ್ನು ಎಗರಿಸಿ ಯಾರೋ ಅಂಗಡಿಯಲ್ಲಿ ಮಾರಿದ್ದರು. ಅಂಗಡಿಯಿಂದ ಮೊಬೈಲ್ ಖರೀದಿಸಿ ಬಳಸುತ್ತಿದ್ದ ಪತಿಯೂರಿನ ಮಹಿಳೆಯಿಂದ ಪೋಲೀಸರು ಮೊಬೈಲ್ ಪೋನ್ ಅನ್ನು ವಶಪಡಿಸಿಕೊಂಡಿದ್ದರು.
ಕಳೆದ ಮೂರು ತಿಂಗಳಲ್ಲಿ ಕಳೆದುಹೋದ ಸುಮಾರು ಇಪ್ಪತ್ತು ಮೊಬೈಲ್ ಪೋನ್‍ಗಳನ್ನು ಮರಳಿ ಪಡೆದು ಅವುಗಳ ನಿಜವಾದ ಮಾಲೀಕರಿಗೆ ಹಿಂತಿರುಗಿಸಲಾಗಿದೆ.




