HEALTH TIPS

ಎನ್‌ಎಂಎಚ್‌ಸಿ ದೇಶದ ಅಭಿಲಾಷೆಯ ಪ್ರತಿನಿಧಿ: ಎಸ್‌. ಜೈಶಂಕರ್‌

ಅಹಮದಾಬಾದ್‌: ರಾಷ್ಟ್ರೀಯ ಕಡಲ ಪರಂಪರೆ ಸಂಕೀರ್ಣವು (ಎನ್‌ಎಂಎಚ್‌ಸಿ) ದೇಶದ ಕಡಲ ಪರಂಪರೆ ಮತ್ತು ಅಭಿಲಾಷೆಯನ್ನು ಪ್ರತಿನಿಧಿಸಲಿದೆ ಎಂದು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಬುಧವಾರ ತಿಳಿಸಿದ್ದಾರೆ.

ನಗರದಿಂದ 80 ಕಿ.ಮೀ. ದೂರದಲ್ಲಿರುವ ಪ‍್ರಾಚೀನ ಸಿಂಧೂ ಕಣಿವೆ ನಾಗರಿಕತೆಯ (ಐವಿಸಿ) ಪ್ರಮುಖ ನಗರಗಳಲ್ಲಿ ಒಂದಾದ ಲೋಥಲ್‌ನ ಪುರಾತತ್ವ ಸ್ಥಳಕ್ಕೆ ಹಾಗೂ ನಿರ್ಮಾಣ ಹಂತದಲ್ಲಿರುವ ಎನ್‌ಎಂಎಚ್‌ಸಿಗೆ ಭೇಟಿ ನೀಡಿದ ಸಂದರ್ಭ, 'ಕಡಲ ಕ್ಷೇತ್ರದಲ್ಲಿನ ನಮ್ಮ ಸಂಶೋಧನೆ, ಯೋಜನೆ ಮತ್ತು ನಿರೂಪಣೆಗಳನ್ನು ಈ ಕೇಂದ್ರವು ಸಾಕಾರಗೊಳಿಸಲಿದೆ' ಎಂದು ಸಾಮಾಜಿಕ ಜಾಲತಾಣ 'ಎಕ್ಸ್‌'ನಲ್ಲಿ ಉಲ್ಲೇಖಿಸಿದ್ದಾರೆ.

ಜೈಶಂಕರ್‌ ಮೂರು ದಿನಗಳಿಂದ ಗುಜರಾತ್‌ ಪ್ರವಾಸದಲ್ಲಿದ್ದಾರೆ.

ಬಂದರು ಹಾಗೂ ಜಲಸಾರಿಗೆ ಸಚಿವಾಲಯವು ದೇಶದ 4,500 ವರ್ಷಗಳ ಹಳೆಯ ಕಡಲ ಪರಂಪರೆಯನ್ನು ಪ್ರದರ್ಶಿಸಲಿಕ್ಕಾಗಿ ಲೋಥಲ್‌ನಲ್ಲಿ ವಿಶ್ವದರ್ಜೆಯ ಎನ್‌ಎಂಎಚ್‌ಎಸ್‌ ಸ್ಥಾಪಿಸುತ್ತಿದೆ.

ಕೇಂದ್ರ ಸಚಿವ ಸಂಪುಟವು ಈ ಯೋಜನೆಗೆ 2024ರ ಅಕ್ಟೋಬರ್‌ನಲ್ಲಿ ಅನುಮೋದನೆ ನೀಡಿದ್ದು, ಎರಡು ಹಂತಗಳಲ್ಲಿ ಪೂರ್ಣಗೊಳ್ಳಲಿದೆ. ಮೊದಲ ಹಂತವು 2025ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ಯೋಜನೆಯಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ 22 ಸಾವಿರ ಉದ್ಯೋಗ ಸೃಷ್ಟಿಯಾಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries