ತಿರುವನಂತಪುರಂ: ಸಂದೀಪ್ ಸೋಮನಾಥ್ ಅವರನ್ನು ಕೇರಳ ಬಿಜೆಪಿ ರಾಜ್ಯ ಮಾಧ್ಯಮ ಸಂಚಾಲಕರನ್ನಾಗಿ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಘೋಷಿಸಿದ್ದಾರೆ. ಜನ್ಮಭೂಮಿ ದೆಹಲಿ ಬ್ಯೂರೋ ಮುಖ್ಯಸ್ಥರಾಗಿದ್ದ ಸಂದೀಪ್ ಇತ್ತೀಚೆಗೆ ಕೇರಳಕ್ಕೆ ಮರಳಿ ಆಗಮಿಸಿದ್ದರು. ಹೊಸ ಜವಾಬ್ದಾರಿಯನ್ನು ತನ್ನ ಸಾಮಥ್ರ್ಯಕ್ಕೆ ತಕ್ಕಂತೆ ಕರ್ತವ್ಯ ನಿರ್ವಹಿಸುವುದಾಗಿ ಸಂದೀಪ್ ಮಾಧ್ಯಮಗಳಿಗೆ ತಿಳಿಸಿದರು.
ಏತನ್ಮಧ್ಯೆ, ರಾಜೀವ್ ಚಂದ್ರಶೇಖರ್ ಅವರು ಅಭಿಜಿತ್ ಆರ್ ನಾಯರ್ ಅವರನ್ನು ರಾಜ್ಯ ಸಾಮಾಜಿಕ ಮಾಧ್ಯಮ ಸಂಚಾಲಕರನ್ನಾಗಿ ನೇಮಿಸಿದರು. ಅಭಿಜಿತ್ ಬಿಜೆಪಿಯ ರಾಷ್ಟ್ರೀಯ ಕಾರ್ಯತಂತ್ರ ತಂಡವಾದ ವಾರಾಹಿಯ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಯುವ ಮೋರ್ಚಾದ ಮಾಜಿ ರಾಷ್ಟ್ರೀಯ ಕಾರ್ಯದರ್ಶಿ ಅನೂಪ್ ಆಂಟನಿ ಅವರನ್ನು ಈ ಹಿಂದೆ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳ ಉಸ್ತುವಾರಿಯಾಗಿ ನೇಮಿಸಲಾಗಿತ್ತು.
ರಾಜೀವ್ ಚಂದ್ರಶೇಖರ್ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡ ನಂತರ, ಮೊದಲು ನೇಮಕಗೊಂಡ ವ್ಯಕ್ತಿ ಅನೂಪ್ ಆಂಟನಿ.





