HEALTH TIPS

ವ್ಯಾಜ್ಯ ಇತ್ಯರ್ಥಕ್ಕೆ ವ್ಯಾಪ್ತಿ ವಿಧಿಸಬಹುದು: ಸುಪ್ರೀಂ ಕೋರ್ಟ್‌

ನವದೆಹಲಿ: ನೌಕರಿಗೆ ಸಂಬಂಧಿಸಿದ ಯಾವುದೇ ವ್ಯಾಜ್ಯವನ್ನು ನಿರ್ದಿಷ್ಟವಾದ ನ್ಯಾಯಾಲಯದ ವ್ಯಾಪ್ತಿಯಲ್ಲೇ ಬಗೆಹರಿಸಿಕೊಳ್ಳಬೇಕು ಎಂಬ ಷರತ್ತನ್ನು ಖಾಸಗಿ ವಲಯದ ಉದ್ಯೋಗದಾತರು ನೇಮಕಾತಿ ಪತ್ರದಲ್ಲಿ ವಿಧಿಸಬಹುದು ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ.

ನ್ಯಾಯಮೂರ್ತಿಗಳಾದ ದೀಪಾಂಕರ್ ದತ್ತ ಮತ್ತು ಮನಮೋಹನ್ ಅವರು ಇರುವ ವಿಭಾಗೀಯ ಪೀಠವು ಈ ಮಾತು ಹೇಳಿದೆ.

'ನ್ಯಾಯಾಲಯದ ಮೂಲಕ ಪ್ರಕರಣ ಬಗೆಹರಿಸಿಕೊಳ್ಳುವ ಹಕ್ಕನ್ನು ಯಾವುದೇ ಒಪ್ಪಂದದ ಮೂಲಕ ಕಿತ್ತುಕೊಳ್ಳಲು ಅವಕಾಶ ಇಲ್ಲ. ಆದರೆ ಆ ಹಕ್ಕನ್ನು ನಿರ್ದಿಷ್ಟ ನ್ಯಾಯಾಲಯಕ್ಕೆ ಸೀಮಿತಗೊಳಿಸಬಹುದು' ಎಂದು ಪೀಠವು ಹೇಳಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries