ಕಾಸರಗೊಡು: ಜಿಲ್ಲಾ ನಿರ್ಮಾಣ ಕೇಂದ್ರದಲ್ಲಿ ಜೂನಿಯರ್ ಇಂಜಿನಿಯರ್-ಸಿವಿಲ್ ಮತ್ತು ಎಲೆಕ್ಟ್ರಿಕಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅಂಗೀಕೃತ ವಿಶ್ವವಿದ್ಯಾಲಯದಿಂದ ಸಿವಿಲ್ ಇಂಜಿನಿಯರಿಂಗ್ ಪದವಿ ಅಥವಾ ಪಾಲಿಟೆಕ್ನಿಕ್‍ನಿಂದ ಡಿಪೆÇ್ಲಮಾ ಸಿವಿಲ್ ಇಂಜಿನಿಯರ್ ಪದವಿ ಅರ್ಹತೆಯಾಗಿದೆ.
ಸೆಕೆಂಡರಿ ಮಟ್ಟದಿಂದ ಪ್ರತಿ ಪರೀಕ್ಷೆಯಲ್ಲಿ ಪಡೆದ ಅಂಕಗಳು, ಗ್ರೇಡ್ ಮಾಹಿತಿಯನ್ನು ಒಳಗೊಂಡಿರುವ ಫೆÇೀಟೋ ಇರುವ ಬಯೋಡೇಟಾ, ಅರ್ಹತೆಯನ್ನು ಸಾಬೀತುಪಡಿಸುವ ಪ್ರಮಾಣಪತ್ರಗಳ ಸ್ವಯಂ ದೃಢೀಕರಿಸಿದ ಪ್ರತಿಗಳ ಸಹಿತ ಏ.24ರಂದು ಸಂಜೆ 4 ಗಂಟೆಯವರೆಗೆ ಅರ್ಜಿ ಅಂಚೆ ಮೂಲಕ ಸ್ವೀಕರಿಸಲಾಗುವುದು. ವಯಸ್ಸಿನ ಮಿತಿ 35 ವರ್ಷಗಳಾಗಿದ್ದು, ಈ ಬಗ್ಗೆ ದೂರವಾಣಿ ಸಂಖ್ಯೆ (0467 2202572, 9188043550)ಮೂಲಕ ಹೆಚ್ಚಿನ ಮಾಹಿತಿ ಲಭಿಸುವುದು. ಅರ್ಜಿಯನ್ನು ಪ್ರಧಾನ ವ್ಯವಸ್ಥಾಪಕರು, ಜಿಲ್ಲಾ ನಿರ್ಮಾಣ ಕೇಂದ್ರ, ಆನಂದಾಶ್ರಮ ದಾರಿ, 671531 ಎಂಬ ವಿಳಾಸಕ್ಕೆ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.




