ಬಿಸಿಲ ಬೇಗೆಯಿಂದ ಬೇಸತ್ತು ಹೋಗಿರೋ ಜನರಿಗೆ ಫ್ಯಾನ್ಸ್ ಕೊಂಚ ರಿಲ್ಯಾಕ್ಸ್ ನೀಡುತ್ತೆ ಅಂದ್ರೆ ತಪ್ಪಾಗಲ್ಲ. ಯಾಕಂದ್ರೆ ಪ್ರತಿಯೊಂದು ಮನೆಯಲ್ಲಿ ಕಡಿಮೆ ಅಂದ್ರೂ ಎರಡು ಕನಿಷ್ಠ ಒಂದು ಸೀಲಿಂಗ್ ಫ್ಯಾನ್ ಅಂತೂ ಇದ್ದೇ ಇರುತ್ತೆ. ಹಾಗಾದ್ರೆ ಈ ಫ್ಯಾನ್ ಅನ್ನು 1 ನೇ ವೇಗದಲ್ಲಿ ಚಲಾಯಿಸುವುದರಿಂದ ವಿದ್ಯುತ್ ಬಳಕೆ ಕಡಿಮೆಯಾಗುತ್ತದೆಯೇ ಮತ್ತು 5 ನೇ ವೇಗದಲ್ಲಿ ಚಲಾಯಿಸುವುದರಿಂದ ಹೆಚ್ಚಿನ ವಿದ್ಯುತ್ ಖರ್ಚಾಗುತ್ತದೆಯೇ ಎಂಬುದನ್ನು ತಿಳಿಯೋಣ.
ಫ್ಯಾನ್ ಅನ್ನು ಕಡಿಮೆ ವೇಗದಲ್ಲಿ ಚಲಾಯಿಸುವುದರಿಂದ ವಿದ್ಯುತ್ ಬಳಕೆ ಕಡಿಮೆಯಾಗಿ, ವಿದ್ಯುತ್ ಬಿಲ್‌ಗಳು ಕಡಿಮೆಯಾಗುತ್ತವೆ ಎಂದು ಸಾಮಾನ್ಯ ಜನರು ನಂಬುತ್ತಾರೆ. ಆದರೆ ನಿಜವಾಗಿಯೂ ಇದರಿಂದ ಏನಾಗುತ್ತದೆ ಎಂಬುವುದನ್ನು ಗಮನಿಸೋಣ.
ಹಳೆಯ ಫ್ಯಾನ್:
ಹಳೆಯ ಫ್ಯಾನ್‌ಗಳು ಯಾಂತ್ರಿಕ ನಿಯಂತ್ರಣಗಳನ್ನು ಹೊಂದಿದ್ದು, ಅವು ಫ್ಯಾನ್ ವೇಗವನ್ನು ಕಡಿಮೆ ಮಾಡಲು ಮೋಟಾರ್‌ನಲ್ಲಿ ಪ್ರತಿರೋಧವನ್ನು ಹೆಚ್ಚಿಸುತ್ತವೆ. ಈ ಪ್ರಕ್ರಿಯೆಯು ಸ್ವಲ್ಪ ವಿದ್ಯುತ್ಅನ್ನು ಬಳಸುತ್ತದೆ, ಆದ್ದರಿಂದ ಹಳೆಯ ಫ್ಯಾನ್‌ಗಳನ್ನು ಕಡಿಮೆ ವೇಗದಲ್ಲಿ ಚಲಾಯಿಸುವುದರಿಂದ ಸ್ವಲ್ಪ ವಿದ್ಯುತ್ ಉಳಿಸಬಹುದು.
ಹೊಸ ಫ್ಯಾನ್:

ಹೊಸ ಫ್ಯಾನ್‌ನಲ್ಲಿ ಮೋಟಾರ್ಅನ್ನು ನೇರವಾಗಿ ನಿಯಂತ್ರಿಸುವ ಎಲೆಕ್ಟ್ರಾನಿಕ್ ನಿಯಂತ್ರಕವಿರುತ್ತದೆ. ಈ ಫ್ಯಾನ್ ಅನ್ನು ಕಡಿಮೆ ವೇಗದಲ್ಲಿ ಚಲಾಯಿಸುವುದರಿಂದ ಶಕ್ತಿಯ ಬಳಕೆಯಲ್ಲಿ ಬಹಳ ಕಡಿಮೆ ವ್ಯತ್ಯಾಸವಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಫ್ಯಾನ್ ಕಡಿಮೆ ವೇಗದಲ್ಲಿ ಚಲಿಸುವುದರಿಂದ ವಿದ್ಯುತ್ ಬಳಕೆ ಸ್ವಲ್ಪ ಹೆಚ್ಚಾಗಬಹುದು ಏಕೆಂದರೆ ನಿಯಂತ್ರಕಕ್ಕೂ ವಿದ್ಯುತ್ ಹೆಚ್ಚಿನ ಅಗತ್ಯವಿರುತ್ತದೆ.
ದೊಡ್ಡ ಫ್ಯಾನ್‌ಗಳು ಸಣ್ಣ ಫ್ಯಾನ್‌ಗಳಿಗಿಂತ ಹೆಚ್ಚು ವಿದ್ಯುತ್ ಬಳಸುತ್ತವೆ ಎಂದು ಹೇಳಲಾಗಿದೆ. ಅಂದಹಾಗೆ ದೊಡ್ಡ ಕೋಣೆಯನ್ನು ತಂಪಾಗಿಸಲು ಹೆಚ್ಚಿನ ವಿದ್ಯುತ್ ಅಗತ್ಯವಿರುತ್ತದೆ. ಕೋಣೆಯ ಉಷ್ಣತೆ ಹೆಚ್ಚಾದಷ್ಟೂ ಫ್ಯಾನ್‌ಗೆ ಹೆಚ್ಚಿನ ವಿದ್ಯುತ್ ಅಗತ್ಯವಿರುತ್ತದೆ.
ಇನ್ನೂ ಸೀಲಿಂಗ್ ಫ್ಯಾನ್‌ನಲ್ಲಿ ಬಳಸುವ ಮೋಟರ್‌ನ ಗಾತ್ರ ಅದು ಎಷ್ಟು ಶಕ್ತಿಯನ್ನು ಬಳಸುತ್ತದೆ ಎಂಬುದನ್ನು ನಿರ್ಧರಿಸುತ್ತದೆ. ಇನ್ನೂ ಫ್ಯಾನ್ ಸ್ಪೀಡ್ನಲ್ಲಿಟ್ರು, ಕಡಿಮೆಯಿಟ್ರು ಒಂದೇ ರೀತಿ ವ್ಯಾಟ್ ಖರ್ಚಾಗುತ್ತದೆ. ಫ್ಯಾನ್ ಸ್ಪೀಡ್ ಹೆಚ್ಚಿದ್ದರೂ, ಕಡಿಮೆಯಿದ್ದರೂ ಒಂದೇ ರೀತಿಯ ವ್ಯಾಟ್ ಎಳೆದುಕೊಳ್ಳುತ್ತದೆ. ಇದರ ಕ್ವಾಲಿಟಿ ಹೆಚ್ಚಾದಂತೆ ವ್ಯಾಟ್ ಕೂಡ ಕಡಿಮೆಯಾಗುತ್ತದೆ.




