ನವದೆಹಲಿ: ಜಾಹೀರಾತು ನೀತಿಗಳ ದುರುಪಯೋಗದ ಹಿನ್ನೆಲೆಯಲ್ಲಿ 2024ರಲ್ಲಿ ಭಾರತದ 29 ಲಕ್ಷ ಜಾಹಿರಾತುದಾರರ ಖಾತೆಗಳನ್ನು ಅಮಾನತುಗೊಳಿಸಲಾಗಿದೆ ಹಾಗೂ 24.74 ಕೋಟಿ ಜಾಹೀರಾತುಗಳನ್ನು ತೆಗೆದುಹಾಕಲಾಗಿದೆ ಎಂದು ಗೂಗಲ್ ವಾರ್ಷಿಕ ಜಾಹೀರಾತು ಸುರಕ್ಷತಾ ವರದಿಯಲ್ಲಿ ತಿಳಿಸಿದೆ.
ಸಂಸ್ಥೆಯ ಲಾರ್ಜ್ ಲಾಂಗ್ವೇಜ್ ಮಾಡಲ್‌ಗಳಲ್ಲಿ 50ಕ್ಕೂ ಹೆಚ್ಚು ಬದಲಾವಣೆ ತಂದಿರುವುದರಿಂದ, ವಂಚನೆ ಎಸಗಬಲ್ಲ ಜಾಹೀರಾತುಗಳನ್ನು ಗುರುತಿಸಲು ಸಹಾಯಕವಾಗಿದೆ. ಎಐ ಬಳಸಿ ಖ್ಯಾತನಾಮರ ಸೋಗಿನಲ್ಲಿ ವಂಚಿಸುವ ಜಾಹೀರಾತುಗಳ ಮೇಲೂ ಎಚ್ಚರಿಕೆ ಇಡಬಹುದಾಗಿದೆ. ಇದರಿಂದಾಗಿ ವಂಚನೆ ಜಾಹೀರಾತುಗಳ ಬಗ್ಗೆ ದಾಖಲಾದ ದೂರುಗಳ ಸಂಖ್ಯೆ 2024ರಲ್ಲಿ ಶೇ.90ರಷ್ಟು ಇಳಿಕೆಯಾಗಿದೆ.
ಇದೇ ಅವಧಿಯಲ್ಲಿ ವಿಶ್ವಾದ್ಯಂತ 3.92 ಕೋಟಿ ಜಾಹೀರಾತುದಾರ ಖಾತೆಗಳನ್ನು ಅಮಾನತುಗೊಳಿಸಲಾಗಿದ್ದರೆ, ವಿಶ್ವಾದ್ಯಂತ 910 ಕೋಟಿ ಜಾಹೀರಾತುಗಳನ್ನು ಗೂಗಲ್ ತೆಗೆದುಹಾಕಿದೆ.




