HEALTH TIPS

Terror Attack: ಕಪ್ಪು ಬಣ್ಣದಲ್ಲಿ ಮುಖಪುಟ ಮುದ್ರಿಸಿದ ಕಾಶ್ಮೀರದ ದಿನಪತ್ರಿಕೆಗಳು

ಶ್ರೀನಗರ: ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 28 ಜನ ಮೃತಪಟ್ಟಿದ್ದು, ಇಡೀ ದೇಶ ಬೆಚ್ಚಿಬಿದ್ದಿದೆ. ಈ ಕೃತ್ಯವನ್ನು ಖಂಡಿಸಿ ಕಾಶ್ಮೀರದ ಹಲವು ಪ್ರಮುಖ ಪತ್ರಿಕೆಗಳು ಮುಖಪುಟವನ್ನು ಕಪ್ಪು ಬಣ್ಣದಲ್ಲಿ ಮುದ್ರಿಸಿವೆ. 

ಕಪ್ಪು ಬಣ್ಣದ ಮುಖಪುಟದಲ್ಲಿ ಬಿಳಿ ಮತ್ತು ಕೆಂಪು ಬಣ್ಣದ ಮುಖ್ಯಾಂಶ ಮತ್ತು ತಲೆಬರಹವನ್ನು ನೀಡಿವೆ.

ಇದು ಅಮಾನವೀಯ ಕೃತ್ಯದ ಬಗ್ಗೆ ನಿವಾಸಿಗಳು ಮತ್ತು ಮಾಧ್ಯಮಗಳ ದುಃಖವನ್ನು ಸಂಕೇತಿಸುತ್ತದೆ ಎನ್ನಲಾಗಿದೆ.

ಗ್ರೇಟರ್ ಕಾಶ್ಮೀರ್, ರೈಸಿಂಗ್ ಕಾಶ್ಮೀರ್, ಕಾಶ್ಮೀರ್ ಉಜ್ಮಾ, ಅಫ್ತಾಬ್ ಮತ್ತು ತೈಮೀಲ್ ಇರ್ಷಾದ್ ಸೇರಿದಂತೆ ಪ್ರಮುಖ ಇಂಗ್ಲಿಷ್ ಮತ್ತು ಉರ್ದು ದಿನಪತ್ರಿಕೆಗಳ ಸ್ವರೂಪದಲ್ಲಿನ ಬದಲಾವಣೆಯು, ಈ ಪ್ರದೇಶವನ್ನು ದಶಕಗಳಿಂದ ಪೀಡಿಸುತ್ತಿರುವ ಹಿಂಸಾಚಾರವನ್ನು ನೆನಪಿಸುವಂತಿದೆ.

ಭಯೋತ್ಪಾದಕರು ಕಾಲ್ನಡಿಗೆ ಅಥವಾ ಕುದುರೆ ಮೂಲಕ ಮಾತ್ರ ಹೆಚ್ಚಿನ ಜನದಟ್ಟಣೆಯ ಪ್ರವಾಸಿ ತಾಣವನ್ನು ಪ್ರವೇಶಿಸಿ ದಾಳಿ ಮಾಡಬಹುದು ಎಂಬ ಅಂಶವನ್ನು ಎತ್ತಿ ತೋರಿಸಿವೆ. ಇಂತಹ ಭೀಕರ ಘಟನೆಗಳು ಮರುಕಳಿಸದಂತೆ ತಡೆಯಲು ಜಾಗರೂಕತೆ, ಸಮುದಾಯಗಳು ತೊಡಗಿಸಿಕೊಳ್ಳುವಿಕೆ ಮತ್ತು ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತೊಗೆಯುವುದೇ ಮಾರ್ಗವಾಗಿದೆ ಎಂದು ಒತ್ತಾಯಿಸಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries