ಕಾಸರಗೋಡು: ಸಾಮಾಜಿಕ, ಸಾಂಸ್ಕøತಿಕ ಸಂಸ್ಥೆ ರಂಗ ಚಿನ್ನಾರಿ ಕಾಸರಗೋಡು ವತಿಯಿಂದ ಭಜನಾ ಸಂಪದ ಕಾರ್ಯಕ್ರಮ ಮೇ 17ರಂದು ಬೆಳಗ್ಗೆ 9.30ರಿಂದ ಸಂಜೆ 5ರ ವರೆಗೆ ಕಾಸರಗೋಡು ರೈಲ್ವೆ ನಿಲ್ದಾಣ ರಸ್ತೆಯ ಶ್ರೀ ವರದರಾಜ ವೆಂಕಟ್ರಮಣ ದೇವಸ್ಥಾನದ'ಸಂಕೀರ್ತನಾ' ಸಭಾಂಗಣದಲ್ಲಿ ಜರುಗಲಿದೆ.
'ಒಂದು ತಂಡ ಒಂದು ಭಜನೆ-ಐವತ್ತು ಭಜನಾ ಮಂಡಳಿಗಳು-ಐವತ್ತು ವಿಭಿನ್ನ ಭಜನೆಗಳು'ಎಂಬ ವ್ಯವಸ್ಥೆಯೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಮಂತ್ರಾಲಯ ಶ್ರೀ ಗುರುರಾಘವೇಂದ್ರ ಮಠದ ವಿದ್ವಾನ್ ಸುಳಾದಿ ಹನುಮೇಶಾಚಾರ್, ಡಾ. ಅನಂತ ಕಾಮತ್, ಖ್ಯಾತ ಪತ್ರಕರ್ತ ರವೀಂದ್ರ ಜೋಶಿ, ಕಲಾವಿದರು, ಉದ್ಯಮಿಗಳು, ಸಾಮಾಜಿಕ, ಧಾರ್ಮಿಕ ಮುಖಂಡರು ಸೇರಿದಂತೆ ಹಲವು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.





